ಹುಬ್ಬಳ್ಳಿ: ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಪಕ್ಷ. ಐಟಿ ರೈಡ್‌ನಲ್ಲಿ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿರುವ ಹಣ ಕಾಂಗ್ರೆಸ್ ಪಕ್ಷದ ಮುಖಂಡರ ಹಣವಾಗಿದೆ. ಈ ಬಗ್ಗೆ ಇಡಿ ಹಾಗೂ ಸಿಬಿಐನಂತಹ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಇತ್ತೀಚೆಗೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದಿತ್ತು. ಅದರಂತೆ ಹಣ ಬಿಡುಗಡೆ ಮಾಡಿ, ತನ್ನ ಕಮಿಷನ್ ಹಣ ವಸೂಲಿ ಮಾಡಿಕೊಂಡಿದೆ. ಈ ಪ್ರಕರಣದಲ್ಲಿ ಅನೇಕ ಕಾನೂನುಬಾಹಿರ ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕರಾಳಮುಖ ಬಯಲು: ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳಲ್ಲೇ ಕರಾಳಮುಖ ಬಯಲಾಗಿದೆ. ಇಷ್ಟು ದಿನ ಮೇಕಪ್ ಮಾಡಿಕೊಂಡು ಸತ್ಯ ಹರಿಶ್ಚಂದ್ರರ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದೀಗ ಸಿಕ್ಕ ಹಣದ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ನೈತಿಕ ಅಧಃಪತನಕ್ಕಿಳಿದಿದೆ. ಇದೊಂದು ಕಮಿಷನ್ ಸರ್ಕಾರ. ಇವರಿಗೆ ಯಾವುದೇ ರೀತಿಯ ಜನರ ಕಲ್ಯಾಣದ ಬಗ್ಗೆ ಅರಿವು, ಕಾಳಜಿವಿಲ್ಲ ಎಂದರು.
ಮತಬ್ಯಾಂಕ್ಗೆ ಬೋಗಸ್ ಆಶ್ವಾಸನೆ: ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿ, ಇದೀಗ ರಾಜ್ಯದ ಜನರನ್ನು ಕತ್ತಲೆಯಲ್ಲಿ ಇಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ತನ್ನ ಮತಬ್ಯಾಂಕ್‌ಗಾಗಿ ಉಚಿತ ಭಾಗ್ಯ ನೀಡಿದೆ. ಆದರೆ ಯಾವುದೇ ಮುಂಜಾಗ್ರತಾ ಯೋಜನೆ ಬಗ್ಗೆ ವಿಚಾರ ಮಾಡದೇ ಇರುವ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹಿಂದೂಗಳಲ್ಲಿ ಭಯ ಹುಟ್ಟಿಸಿದೆ. ಅದೇ ಭಗವಾನ್ ಅವರು ಕರ್ನಾಟಕದ ಸಮುದಾಯದ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ತಾಕತ್ ಇದ್ದರೆ ಅವರನ್ನು ಬಂಧಿಸಲಿ. ಅದು ಬಿಟ್ಟು ಚಕ್ರವರ್ತಿ ಸೂಲಿಬೆಲೆ ಮೇಲೆ ಎಫ್ಐಆರ್ ಮಾಡಿದ್ದು ಖಂಡನೀಯ. ಕೂಡಲೇ ಅವರ ಮೇಲಿನ ಎಫ್ಐಆರ್ ವಜಾ ಮಾಡಬೇಕೆಂದರು.
ಅನೈತಿಕ ಮಾರ್ಗದಿಂದ ಹಣ ಸಂಗ್ರಹ: ರಾಜ್ಯದಲ್ಲಿ ಕಾಂಗ್ರೆಸ್ ಅನೈತಿಕ ಮಾರ್ಗದಿಂದ ಹಣ ಸಂಗ್ರಹ ಮಾಡುತ್ತಿದೆ. ಇದನ್ನು ತೆಲಂಗಾಣಕ್ಕೆ ವರ್ಗಾವಣೆ ಮಾಡುತ್ತಿದೆ. ಸುಮಾರು ಸಾವಿರ ಕೋಟಿ ಹಣ ಸಂಗ್ರಹಣೆ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಮೋದಿ ಸರ್ಕಾರ ಬಂದ ನಂತರ ವಿದ್ಯುತ್ ವಿಚಾರವಾಗಿ ಹಲವು ಕ್ರಮ ಕೈಗೊಂಡಿದೆ. ರಿನಿವೆಬಲ್ ವಿಚಾರವಾಗಿ ಭಾರತ ಮಹತ್ತರ ಹೆಜ್ಜೆ ಇಟ್ಟಿದೆ. ಇಡೀ ದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸೋಲಾರ್, ರಿನಿವೆಬಲ್ ಪವರ್ ಹೆಚ್ಚಾಗಿದೆ. 39 ಸಾವಿರ ಟನ್ ಕಲ್ಲಿದ್ದಲು ಕೊಡುತ್ತಿದ್ದೇವೆ. ದಿನಕ್ಕೆ 39 ಸಾವಿರ ಟನ್, ಎಲ್ಲ ಸೇರಿ 49 ಸಾವಿರ ಟನ್ ಕಲ್ಲಿದ್ದಲು ಕೊಡುತ್ತಿದ್ದೇವೆ. ಕಳೆದ ಏಳು ದಿನದಲ್ಲಿ 56 ಸಾವಿರ ಟನ್ ಕಲ್ಲಿದ್ದಲು, ರೇಖು ಸಪ್ಲೈ ಆಗುತ್ತಿದೆ ಎಂದರು.
ಇದನ್ನೂಓದಿ: Five state assembly election : ಛತ್ತೀಸ್ಗಢ, ಮಧ್ಯಪ್ರದೇಶ, ತೆಲಂಗಾಣ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ