ETV Bharat / state

ರಮೇಶ್ ಜಾರಕಿಹೊಳಿ ಆಟ ಈ ಸಾರಿ ನಡೆಯಲ್ಲ, ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ: ಶಾಸಕ ಶಿವಗಂಗಾ ಬಸವರಾಜ್ - ಐದು ವರ್ಷ ಸಿದ್ದರಾಮಯ್ಯನೇ ಸಿಎಂ

Mla Shivaganga Basavaraj statement on operation lotus: ನಮ್ಮಲ್ಲಿ ಯಾವುದೇ ಬಣ ಇಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.

MLA Sivaganga Basavaraj spoke to the media.
ಶಾಸಕ ಶಿವಗಂಗಾ ಬಸವರಾಜ್ ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Oct 31, 2023, 5:55 PM IST

ದಾವಣಗೆರೆ: ರಮೇಶ್ ಜಾರಕಿಹೊಳಿ ಅವರ ಆಟ ಈ ಸಾರಿ ನಡೆಯುವುದಿಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಡಿಕೆಶಿಯವರು ಮಾಜಿ ಮಂತ್ರಿ ಆಗುವುದಿಲ್ಲ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದ್ದಾರೆ.

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿ ಸರ್ಕಾರ ಕೆಡವಿದರು. ಈಗ ಅಂಥ ಕೆಲಸ ನಡೆಯುವುದಿಲ್ಲ. ನಾವು 136 ಕಾಂಗ್ರೆಸ್ ಶಾಸಕರು ಜೊತೆಗಿದ್ದೇವೆ ತಿರುಗೇಟು ಕೊಟ್ಟರು.

ಅಪರೇಷನ್ ಮಾಡಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಆಡಿಯೋ, ವಿಡಿಯೋ ಬಿಡುಗಡೆ ಮಾಡ್ತೀವಿ. ಪರಮೇಶ್ವರ್ ಮನೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಭೆ ನಡೆಸಿಲ್ಲ. ನಮ್ಮ ನಮ್ಮ ಸಚಿವರು, ಶಾಸಕರು ನಮ್ಮ ಮುಖಂಡರ ಮನೆಗೆ ಹೋಗ್ತಾರೆ. ಅದಕ್ಕೆ ಬೇರೆ ಯಾವುದೇ ಅರ್ಥ ‌ಕಲ್ಪಿಸುವುದು ಬೇಡ. ಸಿಎಂ ಡಿಸಿಎಂ ಸ್ಥಾನವೂ ಖಾಲಿ ಇಲ್ಲ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ದುಬೈಗೆ ಕೆರದರೂ ಹೋಗುತ್ತೇನೆ. ನಮ್ಮ ನಾಯಕರು ಎಲ್ಲಿಗೆ ಕರೆಯುತ್ತಾರೆಯೋ ಅಲ್ಲಿಗೆ ಹೋಗಿ ಬರ್ತೀನಿ. ನಮ್ಮಲ್ಲಿ ಯಾವುದೇ ಬಣ ಇಲ್ಲ. ನಿಗಮ ಮಂಡಳಿ ಹುದ್ದೆಯನ್ನು ನಾನು ಕೇಳಿಲ್ಲ. ಅದನ್ನು ನಮ್ಮ ನಾಯಕರು ನೋಡಿಕೊಳ್ತಾರೆ ಎಂದರು.

ಸಚಿವ ಸ್ಥಾನ ಹಂಚಿಕೆಯಾಗಲಿ. ಈ ಕುರಿತಂತೆ ಶಾಸಕ ಬೇಳೂರು ಹೇಳಿಕೆಗೆ ನನ್ನ ಬೆಂಬಲ ಇದೆ. ಅಧಿಕಾರ ನಿಂತ ನೀರಾಗಬಾರದು ಎಲ್ಲರಿಗೂ ಅಧಿಕಾರ ಸಿಗಲಿ ಎಂದು ಹೇಳಿದರು.

ಐದು ವರ್ಷ ಸಿದ್ದರಾಮಯ್ಯ ಸಿಎಂ- ಸಚಿವ ಜಮೀರ್: ಸಿಎಂ ಸೀಟ್ ಖಾಲಿ ಇಲ್ಲ, ಇನ್ನು ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ವಸತಿ ಹಾಗು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ಏನೆಂದರೂ ಸಿಎಂ ಸ್ಥಾನದ ಅವಧಿ ಬಗ್ಗೆ ನಿರ್ಧಾರ ಮಾಡೋದು ಹೈಕಮಾಂಡ್ ಎಂದರು.

ಇದನ್ನೂಓದಿ: ಬರದ ನೋವು ಬಳಸಿ ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ಬಿಜೆಪಿಯನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.