ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಆದರೆ, ನಾಮಪತ್ರ ಸಲ್ಲಿಸುವ ಕೊನೆ ಗಳಿಗೆಯಲ್ಲಿ ಅಸ್ವಸ್ಥರಾದ ಕಾಂಗ್ರೆಸ್ ಅಭ್ಯರ್ಥಿ ಆನಂದ ಜಾಧವ್ ಆಸ್ಪತ್ರೆ ಸೇರಿದ್ದಾರೆ.
![congress-candidate-anand-jadhav-suffers-by-heart-attack](https://etvbharatimages.akamaized.net/etvbharat/prod-images/kn-dwd-2-hdmc-election-av-ka10001_23082021172516_2308f_1629719716_410.jpg)
ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿ ಆನಂದ ಜಾಧವ್ ಅವರಿಗೆ ಮೊದಲು ಬಿ-ಫಾರ್ಮ್ ನೀಡಲಾಗಿತ್ತು. ಇವರು ವಾರ್ಡ್ ನಂಬರ್ 13ಕ್ಕೆ ನಾಮಪತ್ರ ಸಲ್ಲಿಕೆ ಮಾಡಬೇಕಿತ್ತು. ಆದರೆ, ಅವರಿಗೆ (ಆಗಸ್ಟ್22) ಭಾನುವಾರ ರಾತ್ರಿ ಲಘು ಹೃದಯಾಘಾತವಾಗಿದ್ದರಿಂದ ಆಸ್ಪತ್ರೆಗೆ ಸೇರಿದ್ದಾರೆ.
![congress-candidate-anand-jadhav-suffers-by-heart-attack](https://etvbharatimages.akamaized.net/etvbharat/prod-images/kn-dwd-2-hdmc-election-av-ka10001_23082021172516_2308f_1629719716_505.jpg)
ಜಾಧವ್ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಬಿ-ಫಾರ್ಮ್ ವಾಪಸ್ ಪಡೆದುಕೊಳ್ಳಲಾಗಿದೆ. ಹೀಗಾಗಿ, ಇವರ ಬದಲಿಗೆ ಹೇಮಂತ್ ಗುರ್ಲಹೊಸೂರ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಆನಂದ್ ಜಾಧವ್ ಚಿಕಿತ್ಸೆ ಪಡೆಯುತ್ತಿದ್ದಾರೆ.
![Hemanta Gurlahausura](https://etvbharatimages.akamaized.net/etvbharat/prod-images/kn-dwd-2-hdmc-election-av-ka10001_23082021172516_2308f_1629719716_1059.jpg)
ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ..