ETV Bharat / state

ಹುಬ್ಬಳ್ಳಿ- ಧಾರವಾಡ ಪಾಲಿಕೆ ಮೇಯರ್ ಕುರ್ಚಿಗಾಗಿ ಕಾಂಗ್ರೆಸ್​- ಬಿಜೆಪಿ ಫೈಟ್

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಅವರಿಗೆ ಲಿಖಿತ ಆದೇಶ ನೀಡಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಜೂ.20 ರಂದು ಧಾರವಾಡದ ಪಾಲಿಕೆ ಸಭಾಭವನದಲ್ಲಿ ನೂತನ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದ್ದಾರೆ.

Congress and BJP fight for mayor chair
ಕಾಂಗ್ರೆಸ್​- ಬಿಜೆಪಿ ಮೇಯರ್ ಕುರ್ಚಿಗಾಗಿ ಕಾದಾಟ
author img

By

Published : Jun 7, 2023, 6:32 PM IST

ಹುಬ್ಬಳ್ಳಿ: ಕೊನೆಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ‌ ನಿಗದಿಯಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆಗೆ ಜೂ.20ರಂದು ದಿನಾಂಕ ನಿಗದಿಯಾಗಿದೆ. ಮೊಟ್ಟ ಮೊದಲ ಬಾರಿಗೆ ಧಾರವಾಡದ ಪಾಲಿಕೆ ಸಭಾಭವನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಮೇಯರ್ ಈರೇಶ ಅಂಚಟಗೇರಿ ಹಾಗೂ ಉಪ ಮೇಯ‌ರ್ ಉಮಾ ಮುಕುಂದ ಅವರ ಅವಧಿ ಮೇ 27ರಂದೇ ಪೂರ್ಣಗೊಂಡಿತ್ತು. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಂದ ನೂತನ ಮೇಯರ್, ಉಪ ಮೇಯರ್ ಆಯ್ಕೆಗೆ ದಿನಾಂಕ ಘೋಷಣೆ ಆಗುವವರೆಗೂ ಇವರಿಬ್ಬರು ಹಂಗಾಮಿಯಾಗಿ ಮುಂದುವರೆದಿದ್ದರು.

ಪಾಲಿಕೆಯಲ್ಲಿ ಶೇ 50ರಷ್ಟು ಮಹಿಳೆಯರು ಬಹುತೇಕ ಹೊಸಬರು. ವಾರ್ಡ್ ಮರುವಿಂಗಡಣೆ ಆಗಿ, ಮೀಸಲಾತಿ ಬದಲಾದಾಗ ಶೇ. 50ರಷ್ಟು ಮಹಿಳಾ ಮೀಸಲಾತಿ ಜಾರಿಯಾಗಿತ್ತು. ಮೀಸಲಾತಿ ಅನುಸಾರ, ಪಾಲಿಕೆ ಕೆಲ ಮಾಜಿ ಸದಸ್ಯರು ತಮ್ಮ ಹೆಂಡತಿ, ತಾಯಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಅನುಭವಿ ಮಹಿಳಾ ಸದಸ್ಯರ ಕೊರತೆ ಕಾಡುತ್ತಿದೆ.

ಕಾಂಗ್ರೆಸ್​ನ ಸುವರ್ಣಾ ಕಲಕುಂಟ್ಲ ಅವರಿಗೆ ಮೇಯರ್ ಹುದ್ದೆ ಸಾಧ್ಯತೆ: ಬಿಜೆಪಿ ಆಡಳಿತವಿರುವ ಹು-ಧಾ ಮಹಾನಗರ ಪಾಲಿಕೆಯಲ್ಲಿ ಆಕಾಂಕ್ಷಿಗಳ ದಂಡೇ ಇದೆ. 82 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯಿಂದ 39, ಕಾಂಗ್ರೆಸ್‌ನಿಂದ 33, ಎಐಎಂಐಎಂ ನಿಂದ 3, ಜೆಡಿಎಸ್ 1 ಹಾಗೂ 6 ಜನ ಪಕ್ಷೇತರರು ಚುನಾಯಿತರಾಗಿದ್ದಾರೆ. ಕಳೆದ ಬಾರಿ ಮೇಯರ್, ಉಪ ಮೇಯರ್ ಆಯ್ಕೆ ಚುನಾವಣೆ ವೇಳೆ ಐವರು ಪಕ್ಷೇತರರು ಹಾಗೂ ಜೆಡಿಎಸ್‌ನ ಒಬ್ಬರು ಬಿಜೆಪಿಗೆ ಮತ ಹಾಕಿದ್ದರು. ಓರ್ವ ಪಕ್ಷೇತರ ಸದಸ್ಯೆ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು. ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತಾಧಿಕಾರ ಹೊಂದಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಪಾಳೆಯದಲ್ಲಿ ಮೇಯರ್, ಉಪಮೇಯರ್ ಆದರೂ ಅಚ್ಚರಿಪಡಬೇಕಿಲ್ಲ. ರಾಜಕೀಯ ವಿದ್ಯಮಾನಗಳ ಬದಲಾವಣೆ ಆಗಿದ್ದೇ ಆದರೇ ಕಾಂಗ್ರೆಸ್​ನ ಸುವರ್ಣಾ ಕಲಕುಂಟ್ಲ ಮೇಯರ್ ಆಗುವ ಸಾಧ್ಯತೆ ಗೋಚರಿಸಿದೆ.

ಕಮಲ ಪಡೆಯಲ್ಲಿ ತೀವ್ರ ಕುತೂಹಲ: ಬಿಜೆಪಿ ಪಾಳೆಯದಲ್ಲಿ ಈಗಿರುವ ಮಹಿಳಾ ಸದಸ್ಯರ ಪೈಕಿ ವಾರ್ಡ್ ನಂ.60ರ ರಾಧಾಬಾಯಿ ಸಫಾರೆ ಅವರು ಮಾತ್ರ ಹಳಬರು. ಆದರೆ, ರಾಧಾಬಾಯಿ ಸಫಾರ ಈಗಾಗಲೇ ಒಂದು ಬಾರಿ ಮೇಯರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಧಾಬಾಯಿ ಸಫಾರೆ ಅವರಿಗೆ ಮತ್ತೆ ಮಣೆ ಹಾಕುತ್ತಾರಾ ಅಥವಾ ಹೊಸಬರಿಗೆ ಅವಕಾಶ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ನಡುವೆ ಪಾಲಿಕೆಯ ಇನ್ನೋರ್ವ ಸದಸ್ಯೆ ರೂಪಾ ದಯಾನಂದ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಕಮಲ ಪಡೆಯ ಬೆಳವಣಿಗೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಧ್ಯಾಹ್ನ ಊಟ ಸೇವಿಸಿದ ಬಳಿಕ ಅಸ್ವಸ್ಥಗೊಂಡ 35 ಸೈನಿಕರು: ಆಸ್ಪತ್ರೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.