ETV Bharat / state

ಶಿವಳ್ಳಿ ಪತ್ನಿಗೆ ಟಿಕೆಟ್​ ನೀಡುವಂತೆ ಬೆಂಬಲಿಗರ ಆಗ್ರಹ...ಚುನಾವಣೆ ಬಳಿಕ ನಿರ್ಧಾರ ಎಂದ ಸಭಾಪತಿ ಸುದರ್ಶನ - undefined

ಸಿ.ಎಸ್.ಶಿವಳ್ಳಿ ಕುಂದಗೋಳ ತಾಲೂಕಿನ ಮನೆಯ ಮಗನಾಗಿದ್ದಾರೆ. ಅವರು ಮಾಡಿದ ಕಾರ್ಯಗಳು ಕುಂದಗೋಳ ಕ್ಷೇತ್ರದಲ್ಲಿ ಜನಜನೀತವಾಗಿವೆ. ಈ ನಿಟ್ಟಿನಲ್ಲಿ ಶಿವಳ್ಳಿಯವರ ಧರ್ಮಪತ್ನಿ ಕುಸುಮಾ ಶಿವಳ್ಳಿಯವರಿಗೆ ಟಿಕೆಟ್ ನೀಡುವ ಮೂಲಕ ಶಿವಳ್ಳಿಯವರ ಕುಟುಂಬ ಮತ್ತೊಮ್ಮೆ ಕುಂದಗೋಳ ಕ್ಷೇತ್ರದ ಸೇವೆ ಸಲ್ಲಿಸಲು ಕಾಂಗ್ರೆಸ್ ವರಿಷ್ಠರು ಅವಕಾಶ ಕಲ್ಪಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ಕೇಳಿಕೊಂಡರು.

ಶಿವಳ್ಳಿ ಬೆಂಬಲಿಗರು ಹಾಗೂ ಅಭಿಮಾನಿಗಳು ಪ್ರತಿಭಟನೆ
author img

By

Published : Apr 17, 2019, 8:02 PM IST

ಹುಬ್ಬಳ್ಳಿ: ಪೌರಾಡಳಿತ ಸಚಿವ ದಿ.ಸಿ.ಎಸ್‌.ಶಿವಳ್ಳಿ ನಿಧನದ ಹಿನ್ನೆಲೆಯಲ್ಲಿ ಘೋಷಣೆಗೊಂಡಿರುವ ಕುಂದಗೋಳ ವಿಧಾನಸಭಾ ಉಪಚುನಾವಣೆಗೆ ಸಿ.ಎಸ್.ಶಿವಳ್ಳಿಯವರ ಪತ್ನಿ ಕುಸುಮಾ ಶಿವಳ್ಳಿಯವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಶಿವಳ್ಳಿ ಬೆಂಬಲಿಗರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಶಿವಳ್ಳಿ ಬೆಂಬಲಿಗರು ಹಾಗೂ ಅಭಿಮಾನಿಗಳು ಪ್ರತಿಭಟನೆ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಿ.ಎಸ್.ಶಿವಳ್ಳಿ ಕುಂದಗೋಳ ತಾಲೂಕಿನ ಮನೆಯ ಮಗನಾಗಿದ್ದಾರೆ. ಅವರು ಮಾಡಿದ ಕಾರ್ಯಗಳು ಕುಂದಗೋಳ ಕ್ಷೇತ್ರದಲ್ಲಿ ಜನಜನಿತವಾಗಿವೆ. ಈ ನಿಟ್ಟಿನಲ್ಲಿ ಶಿವಳ್ಳಿಯವರ ಧರ್ಮಪತ್ನಿ ಕುಸುಮಾ ಶಿವಳ್ಳಿಯವರಿಗೆ ಟಿಕೆಟ್ ನೀಡುವ ಮೂಲಕ ಶಿವಳ್ಳಿಯವರ ಕುಟುಂಬ ಮತ್ತೊಮ್ಮೆ ಕುಂದಗೋಳ ಕ್ಷೇತ್ರದ ಸೇವೆ ಸಲ್ಲಿಸಲು ಕಾಂಗ್ರೆಸ್ ವರಿಷ್ಠರು ಅವಕಾಶ ಕಲ್ಪಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ಕೇಳಿಕೊಂಡರು.

ಬಳಿಕ ಶಿವಳ್ಳಿಯವರ ಪತ್ನಿ ಕುಸುಮಾ ಶಿವಳ್ಳಿ ಅವರು ಮಾತನಾಡಿ, ಪಕ್ಷದ ವರಿಷ್ಠರು ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಮಾಜಿ ಸಭಾಪತಿ ಸುದರ್ಶನ ಅವರು ಎಲ್ಲಾ ರೀತಿಯ ಪರಿಶೀಲನೆ ನಡೆಸುತ್ತಿದ್ದಾರೆ. ತಾಲೂಕಿನ ಜನ ಬೆಂಬಲ ನೀಡುತ್ತಿದ್ದಾರೆ ಎಂದರು.

ಬಳಿಕ ಶಿವಳ್ಳಿಯವರ ಸಹೋದರ ಅಡಿವೆಪ್ಪ ಶಿವಳ್ಳಿ ಮಾತನಾಡಿ ಎಲ್ಲಾ ಶಾಸಕರು ನಮ್ಮ ಅತ್ತಿಗೆ ಅವರಿಗೆ ಬೆಂಬಲ ಕೊಡುವ ಭರವಸೆ ನೀಡಿದ್ದಾರೆ. ನಮ್ಮ ಸಹೋದರ ಮಾಡಿದ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಕಾಂಗ್ರೆಸ್ ಪಕ್ಷದಿಂದ ಸಹೋದರನ‌ ಪತ್ನಿಗೆ ಟಿಕೆಟ್ ನೀಡುವ ಕುರಿತು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಬಳಿಕ ಚರ್ಚೆ: ಸುದರ್ಶನ
ಕುಂದಗೋಳ ವಿಧಾನಸಭಾ ಉಪಚುನಾವಣೆ ಕುರಿತು ಮಾಹಿತಿ ಕಲೆ ಹಾಕಿದ್ದೇವೆ. ಲೋಕಸಭಾ ಚುನಾವಣೆ ಬಳಿಕ ಕುಂದಗೋಳ ವಿಧಾನಸಭಾ ಉಪಚುನಾವಣೆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಮಾಜಿ ಸಭಾಪತಿ ಸುದರ್ಶನ ತಿಳಿಸಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜನರು ಅವರು ತಮ್ಮ ಆಶೋತ್ತರಗಳನ್ನು ತಿಳಿಸಲು ಮುಕ್ತ ಅವಕಾಶವಿದೆ. ಅದೇ ರೀತಿ ಶಿವಳ್ಳಿ ಬೆಂಬಲಿಗರು ತಮ್ಮ ಅಭ್ಯರ್ಥಿ ಕುಸುಮಾ ಶಿವಳ್ಳಿಯವರಿಗೆ ಟಿಕೆಟ್ ನೀಡಲು ಮನವಿ ಸಲ್ಲಿಸಿದ್ದಾರೆ. ನಾವು ಕೂಡ ಎಐಸಿಸಿಗೆ ಈ ಕುರಿತು ತಿಳಿಸುತ್ತೇವೆ. ಈ ಕುರಿತು ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಶಿವಳ್ಳಿಯವರು ಕಾಂಗ್ರೆಸ್ ಪಕ್ಷಕ್ಕೆ ಶ್ರಮಿಸಿದ್ದಾರೆ. ಅದನ್ನು ಕೂಡ ನಾವು ಸ್ಮರಿಸುತ್ತೇವೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಇರುವ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರಾದ ಸಿಎಂ ಕುಮಾರಸ್ವಾಮಿಯವರ ಅಭಿಪ್ರಾಯವನ್ನು ಕೂಡ ಪಡೆಯಲಾಗುತ್ತದೆ. ಕುಸುಮ‌ ಶಿವಳ್ಳಿಯವರಿಗೆ ಟಿಕೆಟ್ ನೀಡುವಂತೆ ಸಾವಿರಾರು ಅಭಿಮಾನಿಗಳು‌ ಹಾಗೂ ಕಾರ್ಯಕರ್ತರು ‌ಮನವಿ ಸಲ್ಲಿಸಿದರು ಎಂದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.