ಹುಬ್ಬಳ್ಳಿ: ಯುವಕನೋರ್ವ ಅಪ್ರಾಪ್ತೆಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಲ್ಲದೆ, ಮನೆಗೆ ಬಂದು ತನ್ನೊಂದಿಗೆ ಬರುವಂತೆ ಒತ್ತಾಯಿಸಿ, ಅವನ ಮನೆಯವರು ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆ ದೇವಾಂಗಪೇಟೆಯಲ್ಲಿ ನಡೆದಿದೆ.
ಸಾಧಿಕ್ ಎಂಬಾತನೇ ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯಿಸಿದವನು. ಅಲ್ಲದೇ ಇವನ ತಾಯಿ ಸಹ ಮನೆಗೆ ಬಂದು ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅವರ ಇನ್ನೋರ್ವ ಮಗನು ಚಾಕು ತೋರಿಸಿ ನಮ್ಮ ವಿರುದ್ಧ ಹೋದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ನಿಮ್ಮ ಮಗಳನ್ನು ನಮ್ಮ ಜೊತೆಗೆ ಕಳುಹಿಸಬೇಕೆಂದು ತಕರಾರು ಮಾಡಿದ್ದಾರೆಂದು ಮಹಿಳೆಯೊಬ್ಬರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!