ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮೇಯರ್, ಉಪಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ. ಕ್ಷೇತ್ರಗಳ ವಿಂಗಡನೆಯಾದ ನಂತರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರವನ್ನ ಹಿಡಿಯುವುದರಲ್ಲಿ ಅನುಮಾನಗಳು ಉಳಿದಿಲ್ಲವಾದ್ದರಿಂದ, ಮೇಯರ್ ಯಾರು ಆಗ್ತಾರೆಂಬ ಚರ್ಚೆಗಳು ಆರಂಭಗೊಂಡಿವೆ.
ಮೇಯರ್ ಸ್ಥಾನವೂ ಹಿಂದುಳಿದ ವರ್ಗ ಎ ಗೆ ಮೀಸಲು ಇರುವುದರಿಂದ ಮತ್ತು ಧಾರವಾಡಕ್ಕೆ ಮೇಯರ್ ಸ್ಥಾನ ಕೊಡಬೇಕೆಂಬ ಕೂಗು ಆಗಾಗ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ 3ನೇ ವಾರ್ಡ್ನಿಂದ ಜಯಭೇರಿ ಬಾರಿಸಿರುವ ವೀರೇಶ ಅಂಚಟಗೇರಿಯವರೇ ಮುಂದಿನ ಮೇಯರ್ ಆಗುತ್ತಾರೆಂಬ ಮಾತುಗಳು ಕೇಳಿ ಬರಲಾರಂಭಿಸಿವೆ.
ಹುಬ್ಬಳ್ಳಿಯಲ್ಲಿ ಮಾಜಿ ಮೇಯರ್ ಪತಿ ಹಾಗೂ ಈ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣ ಮಜ್ಜಗಿ ಹಾಗೂ ರಾಮಣ್ಣ ಬಡಿಗೇರ ಹಾಗೂ ಸತೀಶ್ ಹಾನಗಲ್ ಅವರ ಹೆಸರುಗಳು ಸಹ ಕೇಳಿ ಬರುತ್ತಿವೆ.
ಆದರೆ, ಮೇಯರ್ ಪಟ್ಟ ಯಾರಿಗೆ ದಕ್ಕಲಿದೆ ಎಂಬ ಕುತೂಹಲ ಮೂಡಿದೆ. ಹುಬ್ಬಳ್ಳಿಯವರಿಗೆ ಮೇಯರ್ ಸ್ಥಾನ ಒಲಿಯುತ್ತಾ ಅಥವಾ ಧಾರವಾಡಕ್ಕೆ ಬಿಟ್ಟು ಕೊಡುತ್ತಾರಾ ಎಂಬುದು ಇನ್ನಷ್ಟೇ ತಿಳಿಯಲಿದೆ.