ETV Bharat / state

ಜೆಡಿಎಸ್​ನವರು ಜಾತ್ಯತೀತ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿಗೆ ಮುಂದಾಗಿರುವುದು ದುರ್ದೈವದ ಸಂಗತಿ: ಸಿಎಂ ಸಿದ್ದರಾಮಯ್ಯ

CM Siddaramaiah media response: ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗು ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ​

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Sep 9, 2023, 2:29 PM IST

ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿಕ್ರಿಯೆ

ಹುಬ್ಬಳ್ಳಿ: ಜೆಡಿಎಸ್​ನವರು ಜಾತ್ಯತೀತ ಅಂತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿಗೆ ಮುಂದಾಗಿರುವುದು ದುರ್ದೈವದ ಸಂಗತಿ. ಮಾಜಿ ಪ್ರಧಾನಿ ದೇವೇಗೌಡ ಅವರು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ‌ ಎಂದಿದ್ದರು. ಆದರೆ ಇದೀಗ ಬಿಜೆಪಿಯವರ ಜೊತೆ ಸೇರಿ‌ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಯಾದರೂ ಜೆಡಿಎಸ್​ನವರು ಸೇರಿಕೊಳ್ಳುತ್ತಾರೆ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್​ನ ಬಿಜೆಪಿಯ 'ಬಿಟೀಂ‌' ಅಂತಿದ್ದೆ ಅದಕ್ಕೆ ಅವರು ಕೋಪಿಸಿಕೊಳ್ಳುತ್ತಿದ್ದರು. ಈಗ ಜ್ಯಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡಿದ್ದಾರೆ. ದೇವೇಗೌಡರು ಯಾರೊಂದಿಗೂ ಸೇರಿಕೊಳ್ಳಲ್ಲ ಅಂತ ಪಕ್ಷದ ಉಳಿವಿಗಾಗಿ ಸೇರಿಕೊಂಡ್ವಿ ಅಂತಾರೆ.‌ ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದರು.

ಜಿ 20ಗೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಆಹ್ವಾನ ಮಾಡದಿರುವ ವಿಚಾರವಾಗಿ ಮಾತನಾಡಿದ ಅವರು, ವಿಪಕ್ಷ ನಾಯಕರನ್ನ ಆಹ್ವಾನ‌ ಮಾಡದಿರುವುದು ತಪ್ಪು. ಅಧಿಕೃತವಾಗಿ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಬೇಕಿತ್ತು. ಆದರೆ ಜಿ20 ಸಭೆಗೆ ನ ಕರಿದಿಲ್ಲ. ಕರಿಯುತ್ತಿದ್ದರೆ ಹೋಗುತ್ತಿದೆ. ಕೇವಲ ಊಟಕ್ಕೆ ಕರೆದಿದ್ದರಿಂದ ನಾನು ಹೋಗುವದಿಲ್ಲ, ನಾನು ಜಿ.20 ಸದಸ್ಯ ಅಲ್ಲ, ಎಂದು ಸ್ವಲ್ಪ ಖಾರವಾಗಿ ನುಡಿದರು.

ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ. ಗುಜರಾತ್ ಸಿಎಂ ಆಗಿ ನರೇಂದ್ರ ಮೋದಿಯವರು ಮುಂದೆ ಪ್ರಧಾನಿಯಾಗಿದ್ದಾರೆ. ನನ್ನ ಅಭಿಮಾನಿಗಳಿಗೆ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕೆಂಬ ಅಪೇಕ್ಷೆ ಇದೆ. ಆದರೆ ನಾನು ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ಮಹದಾಯಿ ವಿಚಾರವಾಗಿ ಪ್ರತಿಕ್ರಿಯೆ ‌ನೀಡಿದ ಅವರು, ಕೇಂದ್ರ ಸರ್ಕಾರ ಅರಣ್ಯ ಮತ್ತು ಎನ್ವರಾಂಮೆಂಟ್​ ಕ್ಲಿಯರೆನ್ಸ್ ಕಳಿಸಿಲ್ಲ. ಮೊದಲು ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಕಳಿಸಲಿ. ನಾವು ಪ್ರಧಾನಿಯವರಿಗೆ ಸಮಯ ಕೇಳಿದ್ದೇವೆ. ಮಹದಾಯಿ, ಕೃಷ್ಣಾ,‌ ಕಾವೇರಿ‌ ಸೇರಿದಂತೆ ಹಲವು ವಿಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. ನಿಯೋಗದೊಂದಿಗೆ ಬರುತ್ತೇವೆ ಅಂತಾ ಪ್ರಧಾನಿಗೆ ಪತ್ರ ಬರೆದಿದ್ದೇವೆ. ಆದರೆ ಈವರೆಗೂ ಅವರಿಂದ ಉತ್ತರ ಬಂದಿಲ್ಲ ಎಂದರು.

ಬರಗಾಲ ಘೋಷಣೆಗೆ ನಿಯಮ ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದರು ಪ್ರಯೋಜನವಾಗಿಲ್ಲ. ಪತ್ರ ಬರೆದರೂ ಯಾವುದೇ ರೀತಿಯ ಉತ್ತರ ಬಂದಿಲ್ಲ. ಬರ ಘೋಷಣೆ ವಿಚಾರದಲ್ಲಿ ಹಳೆಯ ಮಾನದಂಡಗಳನ್ನೇ ಅನುಸರಿಸಲಾಗುತ್ತಿದೆ. ಇದರಿಂದಾಗಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ತೊಡಕಾಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಿದೆ ಎಂದು ಹೇಳಿದರು.

ಆದರೆ ಕೇಂದ್ರ ಸರ್ಕಾರವು ತನ್ನ ನೆರವನ್ನು ನೀಡಬೇಕಲ್ಲವೇ. ಆಗಸ್ಟ್ ತಿಂಗಳಲ್ಲಿ ಮಳೆ ಆಗಿಲ್ಲ, ವಿದ್ಯುತ್ ಕೊರತೆಯಿಂದ ರೈತರಿಗೆ ಸ್ವಲ್ಪ ತೊಂದರೆ ಆಗಿದೆ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡ್ತೇವೆ ಎಂದರು. ಈ ವಿಚಾರವನ್ನು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಪ್ರಧಾನಿಗಳ ವಿರುದ್ಧ ನಾನು ವ್ಯಕ್ತಿಗತವಾಗಿ ಆರೋಪ ಮಾಡುತ್ತಿಲ್ಲ. ವಿಷಯಾಧಾರಿತವಾಗಿ ನಾನು ಟೀಕೆಗಳನ್ನು ಮಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ಇಂದಿನಿಂದ ನಾಲ್ಕು ದಿನಗಳ ಕಾಲ ರೈತ ಜಾತ್ರೆ.. ಧಾರವಾಡ ಕೃಷಿ ಮೇಳ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.