ETV Bharat / state

ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ: ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಗೆ ಥಳಿತ - ವ್ಯಕ್ತಿಯ ಜೇಬಿನಲ್ಲಿ ವಿವಿಧ ಮಕ್ಕಳ ಫೋಟೋ

ಮಕ್ಕಳ ಕಳ್ಳತನ ಬಗ್ಗೆ ವದಂತಿಗಳು ರಾಜ್ಯದಲ್ಲಿ ಹೆಚ್ಚಾಗಿ ಹರಡುತ್ತಿದೆ. ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಅನುಮಾನ ಬಂದ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ.

Assault on a suspicious person
ಮಕ್ಕಳ ಕಳ್ಳರ ವದಂತಿ.. ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಗೆ ಥಳಿತ
author img

By

Published : Sep 18, 2022, 9:27 PM IST

ಧಾರವಾಡ: ಜಿಲ್ಲೆಯಲ್ಲಿ ಮಕ್ಕಳ‌ ಕಳ್ಳರ ವದಂತಿ ಹೆಚ್ಚಿರುವ ಹಿನ್ನೆಲೆ ಸಂಶಯಾಸ್ಪದ ವ್ಯಕ್ತಿಗಳು ಓಡಾಟ ಬಹಳ ದುಸ್ತರವಾಗಿದೆ. ಹೀಗಿರುವಾಗ ಮಕ್ಕಳ ಕಳ್ಳ ಎಂದು ಅನುಮಾನಗೊಂಡ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಹಿಂದಿಯಲ್ಲಿ ಮಾತನಾಡುತ್ತಿದ್ದ ಈ ವ್ಯಕ್ತಿಯ ಜೇಬಿನಲ್ಲಿ ವಿವಿಧ ಮಕ್ಕಳ ಫೋಟೋ, ಗುರುತಿನ ಚೀಟಿ ಹಾಗೂ ಎಟಿಎಂ ಕಾರ್ಡ್‌ ಇದ್ದಿದ್ದನ್ನು ನೋಡಿದ ಗ್ರಾಮಸ್ಥರು, ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ 112 ವಾಹನದ ಪೊಲೀಸರು ಧಾವಿಸಿದ್ದಾರೆ. ಪೊಲೀಸರು ಬಂದರೂ ಆ ವ್ಯಕ್ತಿಯನ್ನು ಬಿಡದ ಗ್ರಾಮಸ್ಥರು ಪೊಲೀಸರ ಮುಂದೆಯೇ ಥಳಿಸಿದ್ದಾರೆ.

ನಂತರ ಗ್ರಾಮಸ್ಥರನ್ನು ಬಿಡಿಸಿದ ಪೊಲೀಸರು, ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದು ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ದಾಖಲಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಕ್ಕಳ ಕಳ್ಳರ ವದಂತಿ ಬಗ್ಗೆ ಈಗಾಗಲೇ ಎಸ್.ಪಿ ಅವರು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡರು. ಗ್ರಾಮೀಣ ಭಾಗದಲ್ಲಿ ಜನರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ‌‌‌‌.

ಇದನ್ನೂ ಓದಿ : ಮಕ್ಕಳ ಕಳ್ಳರ ವದಂತಿ.. ಕಾನೂನು ಕೈಗೆ ತೆಗೆದುಕೊಂಡರೆ ಕಠಿಣ ಕ್ರಮದ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.