ETV Bharat / state

ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಚಿಗರಿ : ಸುಗಮ ಸಂಚಾರಕ್ಕಿಂತ ಅವಘಡವೇ ಹೆಚ್ಚು - ಹುಬ್ಬಳ್ಳಿಯಲ್ಲಿ ಚಿಗರಿ ಬಸ್​ ಅಪಘಾತ

ಉಣಕಲ್​ದಿಂದ ಬಂದು ವಿದ್ಯಾನಗರದ ಕಾಲೇಜು ಮುಂಭಾಗದಿಂದ ಮರಳಿ ಹೋಗುವ ಸಮಯದಲ್ಲಿ ಸಿಗ್ನಲ್ ಹಾಕದೇ ಇದ್ದರೂ, ಬಿಆರ್​ಟಿಎಸ್ ಚಿಗರಿ ಬಸ್ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ..

chigari-bus-accident-in-hubballi
ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಚಿಗರಿ
author img

By

Published : Feb 8, 2022, 9:27 PM IST

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಚಿಗರಿ ಬಸ್ ಸೇವೆ ಸುಗಮವಾಗಿ ನಡೆದಿರುವುದಕ್ಕಿಂತ ಅವಘಡ ಸಂಭವಿಸಿದ್ದೇ ಜಾಸ್ತಿ. ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್​ಗಳ ಹಾವಳಿ ತಡೆದುಕೊಳ್ಳುವುದು ದುಸ್ತರವಾಗಿದೆ. ಇಂದು ಕೂಡ ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ವಿದ್ಯಾನಗರದ ಬಳಿ ಸಂಭವಿಸಿದೆ.

ಉಣಕಲ್​ದಿಂದ ಬಂದು ವಿದ್ಯಾನಗರದ ಕಾಲೇಜು ಮುಂಭಾಗದಿಂದ ಮರಳಿ ಹೋಗುವ ಸಮಯದಲ್ಲಿ ಸಿಗ್ನಲ್ ಹಾಕದೇ ಇದ್ದರೂ, ಬಿಆರ್​ಟಿಎಸ್ ಚಿಗರಿ ಬಸ್ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಇದಕ್ಕೊಂದು ಅಂತ್ಯವೇ ಇಲ್ಲದಂತಾಗಿದೆ. ಇನ್ನಾದರೂ ವೈಜ್ಞಾನಿಕ ಸಾರಿಗೆ ವ್ಯವಸ್ಥೆ ಮಾಡಲು ಬಿಆರ್‌ಟಿಎಸ್‌ ಮುಂದಾಗಬೇಕಿದೆ.

ಓದಿ: ಹಿಜಾಬ್ ವಿವಾದ: ನ್ಯಾಯಾಲಯಕ್ಕೆ ಸಂವಿಧಾನವೇ ಭಗವದ್ಗೀತೆ ಎಂದು ಕೋರ್ಟ್​.. ವಕೀಲರ ವಾದ - ಪ್ರತಿವಾದಗಳು ಹೀಗಿದ್ದವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.