ETV Bharat / state

ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯನ್ನ ಮಾರಾಟ ಮಾಡಿದ ಆರೋಪ - darwad latest news

‌ಬಡ ಕುಟುಂಬದಲ್ಲಿ ಹುಟ್ಟಿರುವ ಈ ಮಹಿಳೆ ಧಾರವಾಡದ ಅಂಗಡಿಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯ ಮಾಡಿಕೊಂಡು ಬೇರೆಡೆ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಮಾರಾಟ ಮಾಡಿದ್ದಾರೆಂದು ತಿಳಿದು ಬಂದಿದೆ..

cheating by giving job offer
ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯ ಮಾರಾಟ ಆರೋಪ
author img

By

Published : Mar 31, 2021, 4:49 PM IST

ಧಾರವಾಡ : ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯೋರ್ವಳನ್ನು ಮುಂಬೈಗೆ ಕರೆದೊಯ್ದು ಮಾರಾಟ ಮಾಡಿರುವ ಘಟನೆ ನಡೆದಿದೆ. ಸದ್ಯ ಮಹಿಳೆ ಧಾರವಾಡಕ್ಕೆ ತಲುಪಿದ್ದಾರೆ.

ನನ್ನನ್ನು ದಿಲೀಪ್ ಜೈನ್ ಎಂಬಾತ ಕೆಲಸ ಕೊಡಿಸುವುದಾಗಿ ನಂಬಿಸಿ ಮುಂಬೈಗೆ ಕರೆದುಕೊಂಡು ಹೋಗಿ ಮಾರಾಟ ಮಾಡಿದ್ದಾರೆ. ದಿಲೀಪ ಅವರು ಉಪ್ಪಿನಬೆಟಗೇರಿ ಗ್ರಾಮದವರು. ಇದೀಗ ಅಮ್ಮಿನಬಾವಿಯಲ್ಲಿ ವಾಸವಾಗಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯ ಮಾರಾಟ ಆರೋಪ

ಎರಡು ಲಕ್ಷ ರೂಪಾಯಿಯಂತೆ ಎರಡು ಬಾರಿ ಮಹಿಳೆಯನ್ನು ಮಾರಾಟ ಮಾಡಿದ ಬಳಿಕ ಅವರನ್ನು ಅಲ್ಲೇ ಬಿಟ್ಟು ಬಂದಿದ್ದಾರೆ. ‌ಬಡ ಕುಟುಂಬದಲ್ಲಿ ಹುಟ್ಟಿರುವ ಈ ಮಹಿಳೆ ಧಾರವಾಡದ ಅಂಗಡಿಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯ ಮಾಡಿಕೊಂಡು ಬೇರೆಡೆ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಮಾರಾಟ ಮಾಡಿದ್ದಾರೆಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಓದಿ: ಮಂಗಳೂರು: ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು

ಮುಂಬೈನಲ್ಲಿ ವಾಸವಾಗಿರುವ ಧಾರವಾಡದ ಸ್ಥಳೀಯರೊಬ್ಬರು ಈ ಮಹಿಳೆಗೆ ಆಸರೆಯಾಗಿ ಅಲ್ಲಿಂದ ಟಿಕೆಟ್ ಹಣದ ಸಹಾಯ ಮಾಡಿ ಧಾರವಾಡಕ್ಕೆ ಕಳಿಸಿಕೊಟ್ಟಿದ್ದಾರೆ. ಮಹಿಳೆಗೆ ಮದುವೆಯಾಗಿ ಎರಡು ವರ್ಷಗಳಾಗಿವೆ. ಇಂದು ಬೆಳಗ್ಗೆ ಮನೆಗೆ ಆಗಮಿಸಿದ ಬಳಿಕ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.