ETV Bharat / state

ಅತಿವೃಷ್ಟಿ ಸ್ಥಳಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ : ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ಧಾರವಾಡ ಡಿಸಿ

ಎನ್​ಡಿಆರ್​ಎಫ್​ ಮಾರ್ಗದರ್ಶಿ ಸೂತ್ರಗಳ ಪ್ರಕಾರ 45.5 ಕೋಟಿ ರೂ. ಪರಿಹಾರ ದೊರಕಲಿದೆ. ಕೇಂದ್ರದಿಂದ ಹೆಚ್ಚಿನ ಪರಿಹಾರ ಬಂದ ತಕ್ಷಣ ನೆರೆಯಿಂದ ಹಾನಿಗೊಳಗಾದ ಮನೆ,ಶಾಲೆ, ಅಂಗನವಾಡಿ ಹಾಗೂ ಇತರೆ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಲಾಗುವುದು..

central team visits flood hit areas in dharwad
ಅತಿವೃಷ್ಟಿ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ
author img

By

Published : Sep 5, 2021, 9:46 PM IST

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಪರಿಶೀಲಿಸಲು ಇಂದು ಕೇಂದ್ರದ ಅತಿವೃಷ್ಟಿ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಿತ್ತು.

ಅತಿವೃಷ್ಟಿ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ

ಕಳೆದ ಜುಲೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಸುಮಾರು 500 ಕೋಟಿ ರೂ.ಮೌಲ್ಯದ ಆಸ್ತಿ-ಪಾಸ್ತಿ, ಬೆಳೆ ಹಾನಿಯಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಮೂಲಕ ಸೂಕ್ತ ಪರಿಹಾರ ಒದಗಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂದು ಧಾರವಾಡ ಜಿಲ್ಲೆಗೆ ಆಗಮಿಸಿದ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.

central team visits flood hit areas in dharwad
ಧಾರವಾಡಕ್ಕೆ ಕೇಂದ್ರ ತಂಡ ಭೇಟಿ

ಅಧ್ಯಯನ ತಂಡಕ್ಕೆ ಅತಿವೃಷ್ಠಿ ಹಾನಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ದೊರಕುವ ನಿರೀಕ್ಷೆಯಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ.

ನವಲಗುಂದ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಯಮನೂರಿನ ಪ್ರಾಥಮಿಕ ಶಾಲೆ, ಮಹಾದೇವಿ ಸಿದ್ದಲಿಂಗಪ್ಪ ಬ್ಯಾಳಿ ಅವರ ಜಮೀನಿನಲ್ಲಿನ ಹೆಸರು ಬೆಳೆ ಹಾಗೂ ನವಲಗುಂದ ರೈತ ಮಲ್ಲಪ್ಪ ಬಸಪ್ಪ ಕೊಲ್ಲೇದ್ ಅವರ ಜಮೀನಲ್ಲಿನ ಈರುಳ್ಳಿ ಬೆಳೆಯನ್ನು, ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಜೆ.ಗುರುಪ್ರಸಾದ್, ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶ್ ಕುಮಾರ್ ಅವರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.

ಮಳೆಯಿಂದ ಹಾನಿಗೊಳಗಾದ ಯಮನೂರಿನ ಪ್ರಾಥಮಿಕ ಶಾಲೆ ಪರಿಶೀಲನೆ

ಎನ್​ಡಿಆರ್​ಎಫ್​ ಮಾರ್ಗದರ್ಶಿ ಸೂತ್ರಗಳ ಪ್ರಕಾರ 45.5 ಕೋಟಿ ರೂ. ಪರಿಹಾರ ದೊರಕಲಿದೆ. ಕೇಂದ್ರದಿಂದ ಹೆಚ್ಚಿನ ಪರಿಹಾರ ಬಂದ ತಕ್ಷಣ ನೆರೆಯಿಂದ ಹಾನಿಗೊಳಗಾದ ಮನೆ,ಶಾಲೆ, ಅಂಗನವಾಡಿ ಹಾಗೂ ಇತರೆ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಲಾಗುವುದು. ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಅಧ್ಯಯನ ತಂಡ ನೆರೆ ವರದಿಯನ್ನು ಒಪ್ಪಿದ್ದು, ಇಂದಿನ ಪ್ರವಾಸ ಫಲಪ್ರದವಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತಿ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ್ ಬಿಜಾಪುರ, ನವಲಗುಂದ ತಹಶೀಲ್ದಾರ್ ನವೀನ್ ಹುಲ್ಲೂರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಾಯಾಚಾರಿ ಮತ್ತಿತರರು ಇದ್ದರು. ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ನಾಳೆ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.