ಧಾರವಾಡ : ಎಲ್ಲಿ ಬಹುಮತ ಇರಲ್ಲ ಅಲ್ಲಿ ಗುದ್ದಾಟ ಇದ್ದೇ ಇರುತ್ತೆ. ಈ ಗುದ್ದಾಟದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಏನು ಮಾಡಬೇಕೋ ಎಲ್ಲ ತಂತ್ರಗಾರಿಕೆಯನ್ನ ಮಾಡುತ್ತಿದೆ ಎಂದು ಕಲಬುರಗಿ ಪಾಲಿಕೆ ಚುನಾವಣೆ ವಿಚಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಪಡೆಯಲು ಬೇಕಾದ ಕಾರ್ಯ ಚಟುವಟಿಕೆಗಳನ್ನ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಮಾಡ್ತಾರೆ. ಅಲ್ಲಿ ಯಾರ ಜೊತೆ, ಯಾರು ದೋಸ್ತಿ ಆಗುತ್ತೆ ಎನ್ನುವುದು ಹೇಳಲು ಅಧಿಕೃತ ವ್ಯಕ್ತಿ ನಾನಲ್ಲ. ಆದರೆ, ರಾಜಕಾರಣದಲ್ಲಿ ಯಾರು ಮಿತ್ರರಲ್ಲ, ಯಾರೂ ಶತ್ರು ಅಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ನಾವೇ ಅಧಿಕಾರಕ್ಕೆ ಬರ್ತೇವೆ. ಯಾರನ್ನು ಮೇಯರ್ ಮಾಡಬೇಕು ಎಂದು ಗೆಜೆಟ್ ನೋಟಿಫಿಕೇಷನ್ ಆಗಬೇಕು. ಚುನಾವಣೆ ಪ್ರಕ್ರಿಯೆ ಆಗಬೇಕು ಎಂದು ಉತ್ತರಿಸಿದರು.
ಇದನ್ನೂ ಓದಿ:ಕಲಬುರಗಿ ಪಾಲಿಕೆ ಮೈತ್ರಿ ಕಸರತ್ತು: ಹೆಚ್ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್. ಅಶೋಕ್!