ಧಾರವಾಡ: ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಹಂತಕರನ್ನು ದಾಂಡೇಲಿಗೆ ಕರೆದೊಯ್ದಿರುವ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ದಾಂಡೇಲಿಯ ಕೆಲ ರೆಸಾರ್ಟ್‌ಗಳಲ್ಲಿ ಆರೋಪಿಗಳು ತಂಗಿದ್ದರು ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿದ ಸಿಬಿಐ ಅಧಿಕಾರಿಗಳು ಆರೋಪಿಗಳ ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
2016ರ ಜೂನ್ 15 ರಂದು ಯೋಗೀಶ್ ಗೌಡ ಕೊಲೆ ನಡೆದಿತ್ತು. ಕೊಲೆಗೂ ಮುಂಚೆ ಧಾರವಾಡ ಸುತ್ತಲಿನ ವಿವಿಧ ನಗರಗಳಲ್ಲಿ ಆರೋಪಿಗಳು ವಾಸ ಮಾಡಿದ್ದರು. ದಾಂಡೇಲಿಯಲ್ಲಿಯೂ ತಂಗಿದ್ದರು ಎಂಬ ಮಾಹಿತಿ ಹಿನ್ನೆಲೆ ತನಿಖಾ ತಂಡದ ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ.
ಅಲ್ಲದೇ ಬೆಂಗಳೂರಿನಲ್ಲಿ ಬಂಧಿಸಿದ್ದ ಸುಪಾರಿ ಹಂತಕರನ್ನು ಮಾರ್ಚ್ 7 ರವರೆಗೆ ಸಿಬಿಐ ವಶಕ್ಕೆ ನ್ಯಾಯಾಲಯ ಆದೇಶಿಸಿದ್ದು, ನಾಳೆ ಆ ಎಲ್ಲಾ ಆರೋಪಿಗಳನ್ನು ಸಿಬಿಐ ತಂಡ ನ್ಯಾಯಾಲಯಕ್ಕೆ ಹಾಜರು ಪಡಿಸಲಿದೆ.