ಧಾರವಾಡ: ಸಂಶೋಧಕ, ವಿಚಾರವಾದಿ ಡಾ. ಎಂ. ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಇಂದು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಎಸ್.ಐ. ಟಿಯಿಂದ ಚಾರ್ಜಶೀಟ್ ಸಲ್ಲಿಕೆ ಬಳಿಕ ಇದೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಳೆದ ಆಗಸ್ಟ್ 17 ರಂದು ಜಿಲ್ಲಾ ನ್ಯಾಯಾಲಯಕ್ಕೆ ಎಸ್.ಐ.ಟಿ. ಚಾರ್ಜಶೀಟ್ ಸಲ್ಲಿಸಿತ್ತು. ಚಾರ್ಜಶೀಟ್ ಸಲ್ಲಿಕೆ ಬಳಿಕ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿದೆ.
ಆರು ಆರೋಪಿಗಳ ಪೈಕಿ ಐವರನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಆರೋಪಿಗಳನ್ನು ಪೊಲೀಸರು ಕರೆತರುವ ಸಂದರ್ಭದಲ್ಲಿ ಆರೋಪಿವೋರ್ವ ನಾವು ಅಮಾಯಕರು ಎಂದು ಹೇಳಿದ್ದಾನೆ. ಬಂಧಿತ ಈ ಆರೋಪಿಗಳು ಮುಂಬೈ, ಮೈಸೂರು, ಬೆಳಗಾವಿ ಹಾಗೂ ಧಾರವಾಡ ಜೈಲಿನಲ್ಲಿದ್ದರು.