ETV Bharat / state

ದಿಢೀರ್​ ಕುಸಿದ ರಸ್ತೆ: ಸಮಯಪ್ರಜ್ಞೆಯಿಂದ 20ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ ಬಸ್​ ಚಾಲಕ - ಇತ್ತೀಚಿನ ಹುಬ್ಬಳ್ಳಿ ಸುದ್ದಿ

ಧಾರಾಕಾರ ಮಳೆ ಪರಿಣಾಮ ದಿಢೀರ್​ ರಸ್ತೆ ಕುಸಿದಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮುಂದಾಗುತ್ತಿದ್ದ ಅನಾಹುತ ತಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ.

ರಸ್ತೆ ಕುಸಿದು ಇನ್ನೇನು ಬಸ್​ ಪಲ್ಟಿಯಾಗುವ ಸಂಭವ....ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ !
author img

By

Published : Oct 22, 2019, 10:29 AM IST

ಹುಬ್ಬಳ್ಳಿ: ಧಾರಾಕಾರ ಮಳೆ ಪರಿಣಾಮ ಧಿಡೀರ್​ ರಸ್ತೆ ಕುಸಿದಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿರುವ ಘಟನೆ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ.

ಕುಸಿದ ರಸ್ತೆ ... ಬಸ್ ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು 20 ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ

ಇಂದು ಬೆಳಗ್ಗೆ ಗಿರಿಯಾಲದಿಂದ ಚನ್ನಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತಿದ್ದ ನಗರದ ಸಾರಿಗೆ ಬಸ್, ಚನ್ನಾಪುರ ಗ್ರಾಮದ ಕೆರೆ ಪಕ್ಕದ ರಸ್ತೆಯಲ್ಲಿ ಬರುವಾಗ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಏಕಾಏಕಿ ರಸ್ತೆ ಕುಸಿದಿದೆ. ಈ ವೇಳೆ ಬಸ್ ಪಲ್ಟಿಯಾಗುವ ಸಾಧ್ಯತೆ ಇತ್ತು. ತಕ್ಷಣ ಪರಿಸ್ಥಿತಿ ಅರಿತ ಚಾಲಕ ಬಸ್ ಬೃಹತ್ ತಗ್ಗಿಗೆ ಬೀಳುವುದನ್ನು ತನ್ನ ಸಮಯ ಪ್ರಜ್ಞೆಯಿಂದ ನಿಯಂತ್ರಿಸಿದ್ದಾನೆ.

ಇದರಿಂದಾಗಿ ಬಸ್ಸಿನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ. ಬಸ್ ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಹುಬ್ಬಳ್ಳಿ -01

ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮುಂದಾಗುತ್ತಿದ್ದ ಬಾರೀ ಅನಾಹುತ ತಪ್ಪಿದ ಘಟನೆ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಗಿರಿಯಾಲದಿಂದ ಚನ್ನಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತಿದ್ದ ನಗರದ ಸಾರಿಗೆ ಬಸ್ ಇದ್ದಾಗಿದ್ದು, ಚನ್ನಾಪುರ ಗ್ರಾಮದ ಕೆರೆ ಪಕ್ಕದ ರಸ್ತೆಯಲ್ಲಿ ಬರುವಾಗ ನಿರಂತರವಾಗಿ ಸುರಿಯುವತ್ತಿರುವ ಮಳೆಯಿಂದಾಗಿ ಏಕಾಏಕಿ ರಸ್ತೆ ಕುಸಿದಿದ್ದು ಪರಿಣಾಮ ಬಸ್ ಪಲ್ಟಿಯಾಗುವ ಸಂಭವ ಕಾಣಿಸಿದೆ.‌ ಇದನ್ನು ಗಮನಿಸಿದ ಚಾಲಕ ಬಸ್ ಬೃಹತ್ ತಗ್ಗಿಗೆ ಬಸ್ ಬೀಳುವುದನ್ನು ತನ್ನ ಸಮಯ ಪ್ರಜ್ಞೆಯಿಂದ ನಿಯಂತ್ರಿಸಿದ್ದಾನೆ. ಇದರಿಂದಾಗಿ ಮುಂದಾಗುತ್ತಿದ್ದ ಬಾರಿ ಅನಾಹುತ ಒಂದು ತಪ್ಪಿದಂತಾಗಿದ್ದು, ಬಸ್ಸಿನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಬಸ್ಸಿನ ಚಾಲನಕ ಸಮಯ ಪ್ರಜ್ಞೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.