ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ತ್ವರಿತ ಬಸ್ ಸೇವೆ ( BRTS) ಎರಡು ಪಟ್ಟು ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ.
12% ದರವನ್ನು ಹೆಚ್ಚಿಸಲು ಸರ್ಕಾರ ಆದೇಶ ನೀಡಿದೆ. ಆದರೆ BRTS ಸಂಸ್ಥೆಯವರು ಅದನ್ನು ಮೀರಿ ಶೇ. 27% ದಷ್ಟು ಬಸ್ ದರವನ್ನು ಹೆಚ್ಚಿದ್ದಾರೆ. ಅಂದ್ರೆ ಸುಮಾರು 7 ರಿಂದ 8 ರೂಪಾಯಿ ಹೆಚ್ಚಿಸಿದಂತಾಗಿದೆ. ಇದರಿಂದ ಪ್ರಯಾಣಿಕರಿಗೆ ಹೊರೆ ಆಗಲಿದ್ದು, ಕೆಎಸ್ಆರ್ಟಿಸಿಗೆ ಒಂದು ನ್ಯಾಯ ಹಾಗೂ ಬಿಆರ್‌ಟಿಎಸ್‌ಗೆ ಒಂದು ನ್ಯಾಯನಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇದಲ್ಲದೇ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ "ದರ ಹೆಚ್ಚಾಗಿದೆ ಸಹಕರಿಸಿ" ಅಂತ ಲೇಬಲ್ ಅಂಟಿಸಲಾಗಿದ್ದು, ಬೆಳಿಗ್ಗೆ 10.00 ಗಂಟೆ ಆದರೂ ಕೇವಲ 2 ಕೌಂಟರಗಳಲ್ಲಿ ಟಿಕೆಟ್ ವಿತರಿಸಲಾಗುತ್ತಿದೆ. ಇದರಿಂದ ಸರತಿ ಸಾಲಿನಲ್ಲಿ ನಿಂತು ಸಾಕಷ್ಟು ಸಮಯವನ್ನು ಟಿಕೆಟ್ ಪಡೆಯುವದರಲ್ಲೇ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಇದು ಪ್ರತಿದಿನ ಸಾರ್ವಜನಿಕರು ಅನುಭವಿಸುತ್ತಿರುವ ಪಾಡಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.