ಧಾರವಾಡ: ತಾಲೂಕಿನ ದೇವರಹುಬ್ಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರಕಟ್ಟಿ - ಮಲ್ಲೂರಿನ 3ನೇ ವಾರ್ಡ್ನಲ್ಲಿ ಅಣ್ಣಾ-ತಂಗಿ ಇಬ್ಬರೂ ಚುನಾಯಿತರಾಗಿದ್ದಾರೆ. ಅಣ್ಣ-ತಂಗಿಯ ಗೆಲವು ಗಮನ ಸೆಳೆದಿದೆ.
ಅಣ್ಣಾ ನಾಗರಾಜ ಮಹಾದೇವಪ್ಪ ಘಾಟಿನ್ ಸಾಮಾನ್ಯ ಕ್ಷೇತ್ರದಲ್ಲಿ 363 ಮತಗಳನ್ನು ಪಡೆದ ಆಯ್ಕೆಯಾದರೆ, ಅವರ ತಂಗಿ ಗೀತಾ ನಿಂಗಪ್ಪ ಆಯಟ್ಟಿ 389 ಮತಗಳನ್ನು ಪಡೆದು ಹಿಂದುಳಿದ ವರ್ಗ 'ಅ' ಮಹಿಳಾ ಮೀಸಲು ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಣವಾನಂದ ಸ್ವಾಮೀಜಿ
ನಿಗದಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿರುವ ನಿಂಗಪ್ಪ ಘಾಟಿನ್ ಇವರ ಹಿರಿಯ ಅಣ್ಣನಾಗಿರುವುದು ವಿಶೇಷವಾಗಿದೆ.