ETV Bharat / state

ನಲ್ಲಿಯಲ್ಲಿ ಕೆಂಪು‌ ಬಣ್ಣ ಮಿಶ್ರಿತ ನೀರು: ಧಾರವಾಡದಲ್ಲಿ ಬೆಚ್ಚಿಬಿದ್ದ ಜನ! - color water

ಒಂದು ಕಡೆ ಬರಗಾಲ, ಮತ್ತೊಂದು ಕಡೆ ನೀರಿನ ಸಮಸ್ಯೆ. ಈ ಎಲ್ಲ ಅನಾನುಕೂಲತೆ ನಡುವೆ ಧಾರವಾಡಲ್ಲಿ ಒಂದು ವಿಚಿತ್ರ ಸಂಗತಿ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು
author img

By

Published : Jun 12, 2019, 5:22 PM IST

ಧಾರವಾಡ: ಸಾಮಾನ್ಯವಾಗಿ ನಲ್ಲಿ ತಿರುವಿದರೆ ನೀರು ಬರಬೇಕು. ಆದರೆ, ಇಲ್ಲಿ ನಲ್ಲಿ ತಿರುವಿದರೆ ನೀರು ಬದಲು (ಕೆಂಪು ಬಣ್ಣ ಮಿಶ್ರಿತ) ರಕ್ತದಂತಿರುವ ನೀರು ಬರುತ್ತಿದೆ. ಇಂತಹದ್ದೊಂದು ಆಶ್ಚರ್ಯಕರ ದೃಶ್ಯ ಕಂಡು ಬಂದಿದ್ದು ಧಾರವಾಡದ ಗೊಲ್ಲರ ಓಣಿ ಹಾಗೂ ಹೂಗಾರ ಓಣಿಯಲ್ಲಿ.‌

ಕಳೆದ ವಾರದಿಂದ ಈ ಬಡಾವಣೆಗಳ ನಲ್ಲಿಯಲ್ಲಿ ಕೆಂಪು ಮಿಶ್ರಿತ ಬಣ್ಣದ ನೀರು ಬರುತ್ತಿದ್ದು ಸ್ಥಳೀಯರು ಗಾಬರಿಗೊಳಗಾಗಿದ್ದಾರೆ. ನೀರು ರಕ್ತದ ಬಣ್ಣದಲ್ಲಿ ಬರುತ್ತಿರುವುದರಿಂದ ಬಡಾವಣೆಯ ಮುಖಂಡರು ಜಲ ಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು

ಸಮೀಪದಲ್ಲಿ ಕಸಾಯಿಖಾನೆ ಇರುವುದರಿಂದ ಇಲ್ಲಿನ ನೀರು ಕೊಳವೆಗಳಲ್ಲಿ ಸೇರಿಕೊಂಡಿದೆ. ಇದರಿಂದಲೇ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಸಾಲದೆಂಬಂತೆ ನಲ್ಲಿಯಿಂದ ಬರುತ್ತಿರುವ ನೀರು ಮಾಂಸದ ವಾಸನೆಯಿಂದ ಕೂಡಿದೆ ಎಂದು ಬಡಾವಣೆಯ ಸಾರ್ವಜನಿಕರು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಳೆದು ಒಂದು ತಿಂಗಳಿಂದ ಇಲ್ಲಿಯ ಬಡಾವಣೆಯ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಕ್ಕೆ ಭೇಟಿ‌ ನೀಡಿದ್ದ ಜಲ ಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಬದಲು ಒಬ್ಬರಿಗೊಬ್ಬರಿಗೂ ಆರೋಪ ಮಾಡುತ್ತಾ ಪಲಾಯನ ಮಾಡಿದ್ದು ಸ್ಥಳೀಯರನ್ನು ರೊಚ್ಚಿಗೇಳಿಸಿದೆ. ಬಡಾವಣೆಯ ಜನರ ಸಮಸ್ಯೆ ಮಾತ್ರ ಹಾಗೇ ಇದ್ದು, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

Intro:ಧಾರವಾಡ: ಒಂದು ಕಡೆ ಬಿರು ಬಿಸಿಲಿನ ಬರಗಾಲ ಮುಗಿದು ಮುಂಗಾರು ಮಳೆ ಪ್ರಾರಂಭವಾದ್ರು ಎಷ್ಟೋ ಕಡೆ ನೀರಿಗಾಗಿ ಮಾತ್ರ ಹಾಹಾಕಾರ, ತಾತ್ಸಾರ ನಿಂತಿಲ್ಲ. ಎಷ್ಟೋ ಕಡೆ ವಾರಕೊಮ್ಮೆ ಕುಡಿಯಲು ನೀರು ಅದರಲ್ಲಿ ಕೇಸರು, ಮಣ್ಣು ಆದ್ರು ಜನರು ಅದನ್ನು ಫಿಲ್ಟರ್ನಿಂದ ಮತ್ತು ಬಟ್ಟೆಗಳಿಂದ ಶುದ್ದೀಕರಣ ಮಾಡಿ ಕುಡಿಯುತ್ತಾರೆ. ಆದ್ರೆ ಕುಡಿಯುವ ನೀರಲ್ಲಿ ಬರೀ ರಕ್ತ ಬಂದ್ರೆ ಅದನ್ನು ಹೇಗೆ ಕುಡಿಯೋದು.

ನಲ್ಲಿಯಲ್ಲಿ ನೀರಿನ ಬದಲು ರಕ್ತದ ನೀರು ಬರುವ ದೃಶ್ಯಗಳು ಕಂಡು ಬಂದಿದ್ದು, ಧಾರವಾಡದ ಗೊಲ್ಲರ ಓಣಿ ಹಾಗೂ ಹೂಗಾರ ಓಣಿಯಲ್ಲಿ.‌ ಕಳೆದ ವಾರದಿಂದ ಈ ಬಡಾವಣೆಯಲ್ಲಿ ಜನರು ನೀರು ಕುಡಿಯಲು ಹೋದರೆ ಆ ಬಡಾವಣೆಗಳ ನಲ್ಲಿಯಲ್ಲಿ ಮಾತ್ರ ಅಕ್ಷರಶಃ ಬ್ಲಡ್‌ ಕಲರ್ ಬರ್ತಾ ಇದೆ. (ಕೆಂಪು ಮಿಶ್ರಿತ) ಬರಗಾಲದ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಈ ಓಣಿಯ ಜನರು, ಇವಾಗ ವಾರಕ್ಕೊಮ್ಮೆಯಾದರು ನೀರು ಬಂದರೆ ಅದಕ್ಕೂ ಈ ರೀತಿಯಾದ ಸಮಸ್ಯೆ ಉಂಟಾಗಿ ಜನರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ನಲ್ಲಿಯಲ್ಲಿ ರಕ್ತದ ಬಣ್ಣದ ನೀರನ್ನು ಕುಡಿಯೋದಾದರು ಹೇಗೆ ಅಂತಾ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಅಷ್ಟಕ್ಕೂ ಈ ಅವಾಂತರಕ್ಕೆ ಸಮೀಪದ ಕಸಾಯಿಖಾನೆಯಿಂದ ಹರಿದು ಬರುತ್ತಿರಬಹುದು ಅಲ್ಲಿಂದ ಹೊರಬರುವ ಮೌಂಸದ ನೀರು ಕುಡಿಯುವ ನೀರಿನ ಕೊಳವೆಗಳಲ್ಲಿ ಸೇರಿಕೊಂಡು ಕಾರಣವೇ ಈ ಸಮಸ್ಯೆಯ ಮೂಲ ಎಂದು ಬಡಾವಣೆಯ ಸಾರ್ವಜನಿಕರು ಆರೋಪಿಸಿದ್ದಾರೆ.

ಕಳೆದು ಒಂದು ತಿಂಗಳಿಂದ ಇಲ್ಲಿಯ ಬಡಾವಣೆಯ ಜನರು ಸಮಸ್ಯೆ ಎದುರಿಸುತ್ತಿದ್ದರು ಎಷ್ಟೋ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು ಕ್ಯಾರೆ ಅನ್ನುತ್ತಿಲ್ಲ.ಅಷ್ಟಕ್ಕೂ ಇಲ್ಲಿಯ ಬಡಾವಣೆಯಲ್ಲಿರುವ ದಿನನಿತ್ಯ ಕೂಲಿಗೆ ಹೋಗುವರು, ಆದ್ರೆ ನೀರು ಬಂದಾಗ ಮಕ್ಕಳ ಅದೇ ನೀರನ್ನು ಕುಡಿಯಬಹುದು ಇದರಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಬಂದ್ರೆ ಯಾರು ಹೊಣೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.Body:ಇನ್ನೂ ಸಾರ್ವಜನಿಕರ ಆಕ್ರೋಶದಿಂದ ಸ್ಥಳಕ್ಕೆ ಭೇಟಿ‌ ನೀಡಿರುವ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಓಡೋಡಿ ಬಂದರು ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಅನ್ನೊದು ಈ ಬಡಾವಣೆಯ ಸ್ಥಳೀಯರ ಪ್ರಶ್ನೆಯಾಗಿದೆ.

ಸಮಸ್ಯೆಗೆ ಈಗಲಾದರು ಪರಿಹಾರ ಸಿಗುತ್ತೆ ನೆಮ್ಮದಿಯಿಂದ ನೀರು ಕುಡಿಯಬಹುದು ಅಂತಾ ಅಂದುಕೊಂಡ್ರೆ ಪಾಲಿಕೆಯ ಅಧಿಕಾರಿಗಳ ಪಲಾಯನವಾದಿ ಉತ್ತರ ಇಲ್ಲಿಯ ಸ್ಥಳೀಯರನ್ನು ಮತ್ತಷ್ಟು ಆಕ್ರೋಶ ಬರುವಂತೆ ಮಾಡಿದೆ. ಪಾಲಿಕೆಯ ಅಧಿಕಾರಿಗಳು ಜಲಮಂಡಳಿಯವರ ಮೇಲೆ ಅಪಾದನೆ ಮಾಡುತ್ತಾರೆ. ಅವರು ಇವರು ಮೇಲೆ ಮಾಡುತ್ತಿದ್ದಾರೆ, ಆದ್ರೆ ಇವರ ನಡುವೆ ಓಣಿಯ ಕುಡಿಯುವ ನೀರಿಗಾಗಿ ಪರದಾಡುವದಂತು ತಪ್ಪುತ್ತಿಲ್ಲ. ಈಗಾಲದ್ರು ಇತ್ತ ಈ ಬಡವಾಣೆಯ ಪಾಲಿಕೆ ಸದಸ್ಯ ಆದ್ರು ಇತ್ತ ಗಮನ ಹರಿಸಿ ಸಮಸ್ಯೆ ಗೆ ಪರಿಹಾರ ಮಾಡುವಲ್ಲಿ ಮುತುರ್ವಜಿ ವಹಿಸಿಬೇಕು ಎಂಬುದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.

ಬೈಟ್: ಜಯಲಕ್ಷ್ಮಿ (ಬಡಾವಣೆಯ ಸ್ಥಳೀಯರು)

ಬೈಟ್: ಜಿ.ಎನ್.ಗುತ್ತಿ (ಪಾಲಿಕೆ ಸಹಾಯಕ ಆಯುಕ್ತ ಅಧಿಕಾರಿ)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.