ಧಾರವಾಡ: ಸದಾ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದಲ್ಲಿ ವಾಮಾಚಾರ ಮಾಡಿರುವ ಘಟನೆಯಿಂದ ವಿಭಾಗದ ಅಧ್ಯಾಪಕರು, ಸಿಬ್ಬಂದಿಗೆ ಆತಂಕ ಶುರುವಾಗಿದೆ.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಮಾ ಗುಂಡೂರಾವ್ ಚೇಂಬರ್‌ನಲ್ಲಿ ದುಷ್ಕರ್ಮಿಗಳು ವಾಮಾಚಾರ ಮಾಡಿದ್ದು, ಟೇಬಲ್ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, ಅದರ ಜೊತೆಗೆ 3 ಲಿಂಬೆ ಹಣ್ಣು ಹಾಗೂ ಸುತ್ತಲೂ ಅರಶಿನ -ಕುಂಕುಮವನ್ನು ಹಾಕಿದ್ದಾರೆ.
ಡಾ. ರಮಾ ಅವರು ರಜೆ ಮೇಲೆ ತೆರಳಿದ್ದನ್ನು ಗಮನಿಸಿದ ದುಷ್ಕರ್ಮಿಗಳು ವಿಭಾಗದ ಕಿಟಕಿ ಮೂಲಕ ಈ ರೀತಿ ಮಾಡಿದ್ದಾರೆ. ರಜೆಯಿಂದ ಮರಳಿ ಶುಕ್ರವಾರ ಕರ್ತವ್ಯಕ್ಕೆ ಬಂದು ಚೇಂಬರ್ನ ಕೀಲಿ ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನು ನೋಡಿದ ರಮಾ ಅವರು ಗಾಬರಿಯಿಂದ ಹೊರ ನಡೆದು ಈ ಕುರಿತು ಕವಿವಿ ಕುಲಪತಿ ಗುಡಸಿ ಅವರಿಗೆ ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆ ವಾಮಾಚಾರ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಕೋಲಾರ: ಹೂತು ಹಾಕಿದ್ದ ತಾಯಿ, ಮಗುವಿನ ಶವ ಹೊರತೆಗೆದ ದುಷ್ಕರ್ಮಿಗಳು!