ETV Bharat / state

ಲಾಕ್​​ಡೌನ್ ಸಡಿಲಿಕೆ: ಮತ್ತೆ ಕಾರ್ಯಾರಂಭ ಮಾಡಿದ ಬೆಂಗೇರಿ ತ್ರಿವರ್ಣ ಧ್ವಜ ತಯಾರಿಕಾ ಕೇಂದ್ರ - ಬೆಂಗೇರಿ ಧ್ವಜ ತಯಾರಿಕಾ ಕೇಂದ್ರ

ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಸುವ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಲಾಕ್​ಡೌನ್​​ ಹಿನ್ನೆಲೆ 2 ತಿಂಗಳಿನಿಂದ ಬಂದ್​ ಆಗಿತ್ತು. ಇದೀಗ ಲಾಕ್​ಡೌನ್​​ ಸಡಿಲಿಕೆ ಆಗಿದ್ದರಿಂದ ಮತ್ತೆ ಕಾರ್ಯಾರಂಭ ಮಾಡಿದೆ.

Bengeri flag manufacturing center start its work again
ಲಾಕ್​​ಡೌನ್ ಸಡಿಲಿಕೆ: ಮತ್ತೆ ಕಾರ್ಯಾರಂಭ ಮಾಡಿದ ಬೆಂಗೇರಿ ಧ್ವಜ ತಯಾರಿಕಾ ಕೇಂದ್ರ
author img

By

Published : May 28, 2020, 10:47 AM IST

ಹುಬ್ಬಳ್ಳಿ: ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಸುವ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಇದೀಗ ಲಾಕ್​​ಡೌನ್​ ಸಡಿಲಿಕೆ ಹಿನ್ನೆಲೆ ಮತ್ತೆ ಕಾರ್ಯಾರಂಭ ಮಾಡಿದೆ.

ಹುಳ್ಳಿಯಿಂದ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಾಡುವ ಈ ತ್ರಿವರ್ಣ ಧ್ವಜ ಸಿದ್ಧಪಡಿಸುವ ಸಂಸ್ಥೆ ಕಳೆದ 2 ತಿಂಗಳಿನಿಂದ ಲಾಕ್​​ಡೌನ್​ನಿಂದ​​​ ಬಂದ್ ಆಗಿದ್ದು, ಇದೀಗ ಮತ್ತೆ ಕಾರ್ಯಾರಂಭ ಮಾಡಿದೆ. 2004ರಲ್ಲಿ ಆರಂಭವಾದ ಈ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಧ್ವಜ ತಯಾರಿಸುವ ಮಾನ್ಯತೆ ನೀಡಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ನೂರಾರು ಮಹಿಳೆಯರು ಧ್ವಜ ತಯಾರಿಕೆಯಲ್ಲಿ ತೊಡಗಿದ್ದಾರೆ. ಆದ್ರೆ ಕೊರೊನಾ ಭೀತಿಯಿಂದ ಲಾಕ್​ಡೌನ್ ಜಾರಿ ಮಾಡಿದಾಗಿನಿಂದಾಗಿ ತನ್ನ ಕಾರ್ಯ ನಿಲ್ಲಿಸಿದ್ದ ಈ ಧ್ವಜ ತಯಾರಿಕಾ ಕೇಂದ್ರ ಇದೀಗ ಮತ್ತೆ ಕಾರ್ಯಾರಂಭ ಮಾಡಿದೆ.

ಬೆಂಗೇರಿ ಧ್ವಜ ತಯಾರಿಕಾ ಕೇಂದ್ರ

ಈಗಾಗಲೇ ದಕ್ಷಿಣ ಭಾರತದಿಂದ ಧ್ವಜಕ್ಕೆ ಬೇಡಿಕೆ ಬಂದಿದ್ದು, 10 ಲಕ್ಷ ವಹಿವಾಟು ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಒಟ್ಟು 30 ಹೊಲಿಗೆ ಯಂತ್ರಗಳ ಮೂಲಕ ಧ್ವಜ ತಯಾರಿಸುತ್ತಿದ್ದು, 25ರಿಂದ 30 ಮಹಿಳೆಯರು ನಿತ್ಯ ಧ್ವಜ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. 9 ರೀತಿಯ ಧ್ವಜಗಳು ಈ ಕೇಂದ್ರದಲ್ಲಿ ಸಿದ್ಧವಾಗುತ್ತಿದ್ದು, 6x14 ರಿಂದ 21x14 ಮೀಟರ್​ನ ಧ್ವಜಗಳು ಇಲ್ಲಿ ಸಿದ್ಧವಾಗುತ್ತವೆ. ದಿನಕ್ಕೆ 150ಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳು ಸಿದ್ಧವಾಗುತ್ತಿದ್ದು, ರಾಜ್ಯ ಸೇರಿದಂತೆ ರಾಷ್ಟ್ರದ ಪ್ರತೀ ಭಾಗದಲ್ಲಿಯೂ ಹುಬ್ಬಳ್ಳಿಯಲ್ಲಿ ತಯಾರಾದ ಧ್ವಜಗಳು ರಾರಾಜಿಸುತ್ತವೆ.

ಕಳೆದ ವರ್ಷ 4 ಕೋಟಿ ಆದಾಯ ಗಳಿಸಿದ್ದ ಈ ಸಂಸ್ಥೆ ಇದೀಗ ಮತ್ತೆ ಹೆಚ್ಚಿನ ಆದಾಯ ಗಳಿಸುವ ವಿಶ್ವಾಸ ಹೊಂದಿದೆ. ಧ್ವಜ ಬೇಕು ಅಂದರೆ ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ. ಕುಳಿತಲ್ಲಿಯೇ ಆನ್​​ಲೈನ್ ಮೂಲಕ ಧ್ವಜಗಳನ್ನ ಬುಕ್ ಮಾಡಲು ಹೊಸ ಯೋಜನೆಯನ್ನ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.