ETV Bharat / state

ಪ್ರಿಯಾಂಕ್​ ಖರ್ಗೆಗೆ ಜೊಲ್ಲು ಸುರಿಸುವುದು ಗೊತ್ತಿದೆ, ಹೇಳಿಕೆ ಅವರ ಸಂಸ್ಕೃತಿ ತಿಳಿಸುತ್ತದೆ : ಸಚಿವ ಬಿ ಸಿ ಪಾಟೀಲ - ಈಟಿವಿ ಭಾರತ್​ ಕನ್ನಡ

ಬಿಜೆಪಿಗರು ಸಿಎಂ 5,000ಕೋಟಿ ಎನ್ನುತ್ತಿದ್ದಂತೆ ಜೊಲ್ಲು ಸುರಿಸುತ್ತಿದ್ದಾರೆ ಎಂಬ ಪ್ರಿಯಾಂಕ್​ ಖರ್ಗೆ ಹೇಳಿಕೆ, ಅವರ ಮಾತು ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಬಿ ಸಿ ಪಾಟೀಲ್​ ಹೇಳಿದ್ದಾರೆ.

bc-patil
ಸಚಿವ ಬಿ ಸಿ ಪಾಟೀಲ
author img

By

Published : Sep 18, 2022, 5:16 PM IST

ಧಾರವಾಡ: ಸಿಎಂ ಬೊಮ್ಮಾಯಿ ಅವರು ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ರಾಜ್ಯಕ್ಕೆ ಬಂದಿರುವ ಹಿನ್ನೆಲೆ ಕೃಷಿ ಮೇಳಕ್ಕೆ ಬರಲು ಆಗಲಿಲ್ಲ. ನೀನೆ ಹೋಗಿ ಬಾ ಎಂದು ನನಗೆ ಹೇಳಿದರು ಎಂದು ಧಾರವಾಡದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್​ ಸಮರ್ಥಿಸಿಕೊಂಡರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ 5,000ಕೋಟಿ ಘೋಷಿಸಿದ ಕೂಡಲೇ ಬಿಜೆಪಿಯವರು ಜೊಲ್ಲು ಸುರಿಸುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಜೊಲ್ಲು ಸುರಿಸುವುದು ಗೊತ್ತಿದೆ. ಜೊಲ್ಲು ಸುರಿಸುವುದರಲ್ಲಿ ಅವರು ನಿಸ್ಸೀಮರು. ಅವರೆಲ್ಲ ಹೈಫೈ ಲೈಫ್​ನಲ್ಲಿ ಬೆಳೆದವರು ರೈತರ ಬಗ್ಗೆ ಕಾಳಜಿ ಇಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೆಣ್ಣು ಮಗಳ ಬಗ್ಗೆ ಅಸಹ್ಯವಾಗಿ ಈ ಹಿಂದೆ ಅವರು ಮಾತನಾಡಿದ್ದಾರೆ. ಇದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಪ್ರಿಯಾಂಕ್​ ಖರ್ಗೆಗೆ ಜೊಲ್ಲು ಸುರಿಸುವುದು ಗೊತ್ತಿದೆ, ಹೇಳಿಕೆ ಅವರ ಸಂಸ್ಕೃತಿ ತಿಳಿಸುತ್ತದೆ

ಪ್ರಿಯಾಂಕ್​ ಖರ್ಗೆ ಅವರ ಯಾರೋ ಕೊಟ್ಟ ಉದ್ರಿ ಭಾಷಣ ಮಾಡಿ ಸಿಎಂ ಹೋಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬೊಮ್ಮಾಯಿ ದಡ್ಡರಿಲ್ಲ ಅತ್ಯಂತ ಚಾಣಾಕ್ಷರಿದ್ದಾರೆ. ಭಾಷಣ ಮಾಡುವುದು ಅವರಿಗೆ ಗೊತ್ತಿದೆ. ಯಾವುದೇ ಕಾರ್ಯಕ್ರಮ ನಿಭಾಯಿಸುವ ಶಕ್ತಿ ಬೊಮ್ಮಾಯಿ ಅವರಿಗೆ ಗೊತ್ತಿದೆ. ಬೊಮ್ಮಾಯಿ ಅವರಿಗೆ ಆಡಳಿತ ನಡೆಸುವುದು ಗೊತ್ತು, ಯಾವುದೇ ವಿಷಯ ತೆಗೆದುಕೊಂಡರು ಅದನ್ನು ನಿಭಾಯಿಸುವ ಶಕ್ತಿ ಅವರಿಗಿದೆ. ಅದನ್ನು ಪ್ರಿಯಾಂಕ್​ ಖರ್ಗೆ ಅವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಟಾಂಗ್​ ಕೊಟ್ಟರು.

ಇದನ್ನೂ ಓದಿ : ನಾವು ಮಾಡಿದ ಕಾರ್ಯಗಳಿಂದ ಬೇರೆಯವರು ಪ್ರಚಾರ ಪಡೆಯುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.