ETV Bharat / state

ಹುಬ್ಬಳ್ಳಿಯಲ್ಲಿ ಬಸವೇಶ್ವರ ಮೂರ್ತಿ ಸ್ಥಳಾಂತರ.. ಜನಾಭಿಪ್ರಾಯ ಸಂಗ್ರಹಿಸಿದ ಶೆಟ್ಟರ್​​ - Decision to relocate Basaveshwar statue in Basava garden

ಹುಬ್ಬಳ್ಳಿಯ ಬಸವ ವನದಲ್ಲಿರುವ ಬಸವೇಶ್ವರ ಪುತ್ಥಳಿ ಸ್ಥಳಾಂತರಕ್ಕೆ ನಿರ್ಧಾರ- ಸ್ಥಳಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ, ಪರಿಶೀಲನೆ- ಜನಾಭಿಪ್ರಾಯ ಸಂಗ್ರಹ

Decision to relocate Basaveshwar statue in Basava garden
ಬಸವ ವನದಲ್ಲಿರುವ ಬಸವೇಶ್ವರರ ಪುತ್ಥಳಿ
author img

By

Published : Jul 14, 2022, 6:24 PM IST

Updated : Jul 14, 2022, 6:55 PM IST

ಹುಬ್ಬಳ್ಳಿ: ವಾಣಿಜ್ಯನಗರಿಯ ಪ್ರತಿಷ್ಠಿತ ಯೋಜನೆಯಲ್ಲಿ ಒಂದಾಗಿರುವ ಫ್ಲೈಓವರ್ ನಿರ್ಮಾಣ ಕಾಮಗಾರಿ ದಿನದಿಂದ ದಿನಕ್ಕೆ ಚುರುಕು ಪಡೆದುಕೊಂಡಿದೆ. ಈ ಹಿನ್ನೆಲೆ ನಗರದ ಹೃದಯ ಭಾಗದಲ್ಲಿರುವ ಬಸವ ವನದಲ್ಲಿರುವ ಬಸವೇಶ್ವರರ ಪುತ್ಥಳಿ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ. ಸೂಕ್ತ ಕ್ರಮಗಳನ್ನು ಜರುಗಿಸುವಂತೆ ಬಸವ ಬಳಗ ಒತ್ತಾಯಿಸಿದೆ.

ಹುಬ್ಬಳ್ಳಿಯಲ್ಲಿ ಬಸವೇಶ್ವರ ಮೂರ್ತಿ ಸ್ಥಳಾಂತರ

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪರಿಶೀಲನೆ ನಡೆಸಿ ಬಸವ ಬಳಗದ ಸದಸ್ಯರೊಂದಿಗೆ ಹಾಗೂ ಹುಬ್ಬಳ್ಳಿಯ ನಾಗರಿಕರ ಜೊತೆಗೆ ಸಮಾಲೋಚನೆ ನಡೆಸಿದರು. ಬಸವೇಶ್ವರ ಪುತ್ಥಳಿ ಸ್ಥಳಾಂತರ ಕುರಿತು ನಿರ್ಧಾರಕ್ಕೆ ಬರಲಾಯಿತು.

ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಫ್ಲೈಓವರ್ ಕಾಮಗಾರಿ ಆರಂಭಗೊಂಡಿದ್ದು, ಪ್ಲಾನ್ ಪ್ರಕಾರ ಬಸವ ವನದ ಹತ್ತಿರ ಬರುವ ಫ್ಲೈಓವರ್ ಮೂರ್ತಿಗೆ ಹೊಂದಿಕೊಂಡು ಬರುವ ಹಿನ್ನೆಲೆ ಬಸವೇಶ್ವರ ಪುತ್ಥಳಿ ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಮೂರ್ತಿಯನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು.‌

ಇದನ್ನೂ ಓದಿ: ಹುಬ್ಬಳ್ಳಿ ಫ್ಲೈ ಓವರ್ ಯೋಜನೆಯಲ್ಲಿ ರಾಣಿ ಚನ್ನಮ್ಮನಿಗೆ ಅವಮಾನ: ಉಳ್ಳಾಗಡ್ಡಿ ಮಠ ಆಕ್ರೋಶ

ಈಗಾಗಲೇ ಸಾರ್ವಜನಿಕರ ಅಭಿಪ್ರಾಯ ಹಾಗೂ ಸಮಾಜದವರ ಸಲಹೆ ಮೇರೆಗೆ ಸೂಚಿಸಿದ ಸ್ಥಳದಲ್ಲಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಮತ್ತೊಮ್ಮೆ ಡಿಸೈನ್ ತಯಾರಿಸಿ ಎಲ್ಲರ ಒಮ್ಮತದ ಅಭಿಪ್ರಾಯ ಸಂಗ್ರಹಿಸಿ ಸ್ಥಳಾಂತರ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಮೂರ್ತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಸೂಕ್ತ ತಂತ್ರಜ್ಞಾನದ ಮೂಲಕ ಸ್ಥಳಾಂತರ ಮಾಡಲಾಗುತ್ತದೆ ಎಂದು ಶೆಟ್ಟರ್​ ಭರವಸೆ ನೀಡಿದರು.

Last Updated : Jul 14, 2022, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.