ಹುಬ್ಬಳ್ಳಿ: ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಅವರನ್ನು ಕೆಲವರ ಕುಮ್ಮಕ್ಕಿನಿಂದ ಬಿಜೆಪಿಯಿಂದ ಅಮಾನತುಗೊಳಿಸಿದ್ದು, ಖಂಡನೀಯ ಎಂದು ಮನಸೂರು ಮಠದ ಡಾ. ಬಸವರಾಜ್ ದೇವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾನಂದ ಅವರು ಸದಾನಾಡು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಇವರನ್ನು ಬಿಜೆಪಿ ಪಕ್ಷ ಅಮಾನತು ಮಾಡಿ ಕುರುಬ ಸಮಾಜಕ್ಕೆ ಅಪಮಾನ ಮತ್ತು ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತು ಕೇಳಿ ಶಿವಾನಂದ ಅವರನ್ನು ಅಮಾನತು ಮಾಡಿದೆ. ಮಹೇಶ ಟೆಂಗಿನಕಾಯಿ ಯಾವ ಸೀಮೆಯ ನಾಯಕ ಗೊತ್ತಿಲ್ಲ ಎಂದು ಟೆಂಗಿನಕಾಯಿ ವಿರುದ್ಧ ಹರಿಹಾಯ್ದರು.