ETV Bharat / state

ಆರ್​ಎಸ್ಎಸ್ ದೇಶ ಪ್ರೇಮಿ ಸಂಘಟನೆ: ಸಿಎಂ ಬೊಮ್ಮಾಯಿ - ಸಿಎಂ ಬಸವರಾಜ ಬೊಮ್ಮಾಯಿ

ಆರ್​ಎಸ್ಎಸ್ ದೇಶ ಪ್ರೇಮಿ ಸಂಘಟನೆ. ಬಡವರು, ಅನಾಥ ಮಕ್ಕಳು ಕಟ್ಟಿರುವ ದೀನ ದಲಿತರ ಪರವಾದ ಸಂಘಟನೆಯಾಗಿದೆ. ಹೀಗಾಗಿ, ಆರ್​ಎಸ್ಎಸ್ ಬ್ಯಾನ್ ಮಾಡಿ ಎಂದು ಹೇಳುವುದೇ ದೊಡ್ಡ ದುರ್ದೈವ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

basavaraj bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Sep 30, 2022, 10:46 AM IST

ಹುಬ್ಬಳ್ಳಿ: ಕಾಂಗ್ರೆಸ್​ನವರಿಗೆ ಪಿಎಫ್ಐ ಯಾಕೆ ಬ್ಯಾನ್ ಮಾಡಿದ್ರಿ ಎಂದು ಕೇಳಲು ಆಧಾರವಿಲ್ಲ. ಈ ಹಿಂದೆ ಅವರೇ ಪಿಎಫ್ಐ ಮೇಲಿನ ಕೇಸ್​ಗಳನ್ನು ತೆಗೆದು ಹಾಕಿದ್ರು. ಈಗ ಅದನ್ನು ಮರೆಮಾಚಲು ಆರ್​ಎಸ್ಎಸ್ ಬ್ಯಾನ್ ಮಾಡುವಂತೆ ಹೇಳುತ್ತಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಆರ್​ಎಸ್ಎಸ್ ದೇಶ ಪ್ರೇಮಿ ಸಂಘಟನೆ. ಬಡವರು, ಅನಾಥ ಮಕ್ಕಳು ಕಟ್ಟಿರುವ ದೀನ ದಲಿತರ ಪರವಾದ ಸಂಘಟನೆಯಾಗಿದೆ. ದೇಶದಲ್ಲಿ ಪ್ರವಾಹ ಪರಿಸ್ಥಿತಿ ಬಂದಾಗ ಮುಂದೆ ನಿಂತು ಕೆಲಸ ಮಾಡುತ್ತದೆ. ಅಲ್ಲದೇ, ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಆರ್​ಎಸ್ಎಸ್ ಬ್ಯಾನ್ ಮಾಡಿ ಎಂದು ಹೇಳುವುದೇ ದೊಡ್ಡ ದುರ್ದೈವ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಕಿಡಿಕಾರಿದರು.

ಹುಬ್ಬಳ್ಳಿಯ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಪಿಎಫ್​ಐ ಬ್ಯಾನ್​ ಸ್ವಾಗತಿಸಿದ ಕಾಂಗ್ರೆಸ್​ ನಾಯಕರು: ಆರ್​ಎಸ್​ಎಸ್ ವಿರುದ್ಧವೂ ಕ್ರಮಕ್ಕೆ ಒತ್ತಾಯ

ಇದೇ ಮೊದಲ ಬಾರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಆ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ. ಅದು ಅವರ ಪಕ್ಷದ ವೈಯಕ್ತಿಕ ವಿಚಾರ. ಆ ಬಗ್ಗೆ ವ್ಯಾಖ್ಯಾನ ಮಾಡುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.