ETV Bharat / state

ವಿಜಯೇಂದ್ರ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ: ಸಚಿವ ಸೋಮಶೇಖರ್ - Chief Minister Yeddyurappa's decision

ಬಸವಕಲ್ಯಾಣ ಕ್ಷೇತ್ರದಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ವಿಜಯೇಂದ್ರ ಹಾಗೂ ಸಿಎಂ ಯಡಿಯೂರಪ್ಪ ಕೂಡ ಹೇಳಿದ್ದಾರೆ. ಬಸವಕಲ್ಯಾಣದಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಧಾರವಾಡದಲ್ಲಿ ಸಹಕಾರ ಖಾತೆ ಸಚಿವ ಎಸ್. ಟಿ. ಸೋಮಶೇಖರ ಹೇಳಿದರು.

B. Y. Vijayendra does not contest from Basavakalyana constituency
ಬಿ. ವೈ. ವಿಜಯೇಂದ್ರ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸುದಿಲ್ಲ: ಸಚಿವ ಸೋಮಶೇಖರ್
author img

By

Published : Nov 13, 2020, 12:58 PM IST

ಧಾರವಾಡ: ಉಪಚುನಾವಣೆಯಲ್ಲಿ ಬಿ. ವೈ. ವಿಜಯೇಂದ್ರ ಬಸವಕಲ್ಯಾಣದಿಂದ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ವಿಜಯೇಂದ್ರ ಹಾಗೂ ಸಿಎಂ ಯಡಿಯೂರಪ್ಪ ಕೂಡ ಹೇಳಿದ್ದಾರೆ ಎಂದು ಸಹಕಾರ ಖಾತೆ ಸಚಿವ ಎಸ್. ಟಿ. ಸೋಮಶೇಖರ ಹೇಳಿದರು.

ಬಿ. ವೈ. ವಿಜಯೇಂದ್ರ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸುದಿಲ್ಲ: ಸಚಿವ ಸೋಮಶೇಖರ್

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣದಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ರಮೇಶ ಜಾರಕಿಹೊಳಿಯವರು ಶಾಸಕರೊಂದಿಗೆ ನಡೆಸಿದ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಸಿದವರು ಬಿಜೆಪಿ ಶಾಸಕರೇ ಹೊರತು ಬೇರೆ ಯಾರೂ ಅಲ್ಲ. ಅವರು ಸಭೆ ನಡೆಸಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಮುಖ್ಯಮಂತ್ರಿಗೆ ಮಂತ್ರಿಮಂಡಲ ವಿಸ್ತರಣೆ ಮಾಡುವ ಪರಮಾಧಿಕಾರ ಇದ್ದೇ ಇದೆ ಎಂದರು.

ಹೆಚ್. ವಿಶ್ವನಾಥ್ ಅವರು ಹಿರಿಯರು. ಅವರಿಗೆ ರಾಜಕೀಯದಲ್ಲಿ ಅನುಭವವಿದೆ. ಇನ್ನೂ ಮಂತ್ರಿ ಮಂಡಲ ವಿಸ್ತರಣೆಯಾಗಿಲ್ಲ. ಅದರ ಬಗ್ಗೆ ಮಾತನಾಡುವ ಅಧಿಕಾರ ಸಚಿವರಿಗಾಗಲಿ, ಶಾಸಕರಿಗಾಗಲಿ ಇಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಹೇಳಿದರು.

ರವಿ ಬೆಳಗೆರೆ ನಿಧನಕ್ಕೆ ಸಂತಾಪ:

ಪತ್ರಕರ್ತ ರವಿ ಬೆಳಗೆರೆ ನಿಧನದ ಸುದ್ದಿ ಬೇಸರ ತರಿಸಿದೆ. ಅವರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು. ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ. ಸಿಬಿಐ ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.