ಹುಬ್ಬಳ್ಳಿ: ಮಹಾಮಾರಿ ಕೊರೊನಾದಿಂದ ಆತಂಕಕ್ಕೊಳಗಾದ ಜನರು ಇದೀಗ ಮನೆ ಮದ್ದಿನಿಂದ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸೋಂಕಿಗೆ ಔಷಧವೇ ಇಲ್ಲ ಎಂದು ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದ ಸಾರ್ವಜನಿಕರು ಇದೀಗ ಮನೆ ಮದ್ದಾಗಿರುವ ಕಷಾಯದತ್ತ ಮುಖ ಮಾಡಿದ್ದಾರೆ.
ಹೌದು, ಕೋವಿಡ್-19 ವಿರುದ್ಧ ಹೋರಾಡಲು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕಷಾಯದ ಪಾತ್ರ ದೊಡ್ಡದು. ಹಾಗಾಗಿ ಕೊರೊನಾಗೆ ಕಷಾಯವೇ ಮದ್ದು ಎನ್ನುತ್ತಾರೆ ನಗರದ ಜನ.
ಈ ವಿಷಯ ತಿಳಿದ ಮೇಲೆ ನಗರದ ಹಲವು ಹೋಟೆಲ್ಗಳಲ್ಲಿ ಕಷಾಯದ್ದೇ ಮಾತು. ಹೋಟೆಲ್ಗೆ ಹೋದರೆ ಈ ಮೂದಲು ಚಹಾ ಕೇಳುತ್ತಿದ್ದ ಜನರು ಇದೀಗ ಕಷಾಯ ಕೇಳುತ್ತಿದ್ದಾರೆ. ಹಾಗಾಗಿ ಕಷಾಯಕ್ಕೆ ಭಾರಿ ಬೇಡಿಕೆ ಬಂದಿದೆ. ಪ್ರತಿ ಹೋಟೆಲ್ಗಳಲ್ಲಿ ದಿನಕ್ಕೆ ಸರಿಸುಮಾರು ಒಂದು ಕೆಜಿಯಷ್ಟು ಕಷಾಯದ ಪೌಡರ್ಅನ್ನು ಖಾಲಿ ಮಾಡುತ್ತಿವೆ.
ಆರೋಗ್ಯದ ದೃಷ್ಟಿಯಿಂದ ಜನರು ಹೆಚ್ಚು ಹೆಚ್ಚು ಕಷಾಯ ಕೇಳುತ್ತಿದ್ದಾರೆ. ಇದರಿಂದ ಹೋಟೆಲ್ ಮಾಲೀಕರು ಸಹ ಲಾಭದಲ್ಲಿದ್ದಾರೆ. ಈ ಹಿಂದೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಹಳ್ಳಿಯಲ್ಲಿ ನೆಗಡಿ, ಕೆಮ್ಮು, ಜ್ವರ ಬಂದಾಗ ಕಷಾಯ ಅಥವಾ ಶುಂಟಿ ಟೀ ಕುಡಿಯುತ್ತಿದ್ದರು. ಅದರಂತೆ ಈಗ ಕಷಾಯ ಕುಡಿಯುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.