ETV Bharat / state

ರಸ್ತೆಯಲ್ಲಿ ರಂಗೋಲಿ ಬಿಡಿಸಿ ಮತದಾನ ಜಾಗೃತಿ ಮೂಡಿಸಿದ ಕಲಾವಿದರು.. ನಾವೂ ನೀವೆಲ್ಲರೂ ಹಕ್ಕು ಚಲಾಯಿಸೋಣ - undefined

ರಸ್ತೆ ಮೇಲೆ ಮತದಾನದ ಮಹತ್ವ ಸಾರುವ ರಂಗೋಲಿ. ಮತದಾನಕ್ಕೆ ಸಂಬಂಧಿಸಿದ ಘೋಷಣೆಗಳ ಅನಾವರಣ.  ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಕಿವಿಮಾತು.

ರಂಗೋಲಿ ಬಿಡಿಸಿ ಮತದಾನ ಜಾಗೃತಿ
author img

By

Published : Apr 22, 2019, 12:05 PM IST

Updated : Apr 22, 2019, 12:17 PM IST

ಹುಬ್ಬಳ್ಳಿ: ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಾವಿದರ ತಂಡವೊಂದು ರಸ್ತೆಯ ಮೇಲೆ ರಂಗೋಲಿ ಬಿಡಿಸಿ ಚಿತ್ರಗಳನ್ನು ಬರೆದು ಮತದಾರರಲ್ಲಿ ಅರಿವು ಮೂಡಿಸಿದರು.
ಶನಿವಾರ ರಾತ್ರಿ ಚೆನ್ನಮ್ಮ ವೃತ್ತದ ಬಳಿಯ ರಸ್ತೆ ಪಕ್ಕದಲ್ಲಿ ಮತದಾನದ ಮಹತ್ವ ಸಾರುವ ಚಿತ್ರಗಳನ್ನು ಬರೆದು ಅದರಲ್ಲಿ ಮತದಾನಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಬಣ್ಣ ಬಣ್ಣದ ರಂಗೋಲಿಗಳಲ್ಲಿ ಅನಾವರಣಗೊಳಿಸಲಾಗಿತ್ತು.

ಈ ವೇಳೆ ಕಲಾವಿದರ ತಂಡ ಸಾರ್ವಜನಿಕರನ್ನುದ್ದೇಶಿಸಿ, ಭಾರತ ದೇಶ ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿನ ಪ್ರತಿ ಪ್ರಜೆಯೂ ದೇಶವನ್ನು ರಕ್ಷಿಸಿ, ಅಭಿವೃದ್ಧಿಗೊಳಿಸುವ ಹೊಣೆಹೊತ್ತಿದ್ದಾನೆ. ಇದಕ್ಕಾಗಿ ಜನರು ಯಾವುದೇ ಆಮಿಷಗಳಿಗೆ ಒಳಗಾಗದೇ, ಸೂಕ್ತ ಅಭ್ಯರ್ಥಿಯನ್ನು ಆಯ್ದು ಮತ ಚಲಾಯಿಸಬೇಕು ಎಂಬ ಸಂದೇಶವನ್ನು ನೀಡಿದರು.

sample description
Last Updated : Apr 22, 2019, 12:17 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.