ETV Bharat / state

ಬಟ್ಟೆ ಬ್ಯಾಗ್​ ಬಳಸಿ ಪರಿಸರ ಉಳಿಸಿ.. ಅವಳಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧದತ್ತ ದಾಪುಗಾಲು..

ಪ್ಲಾಸ್ಟಿಕ್​ನಿಂದಾಗುವ ಅನಾಹುತದ ಬಗ್ಗೆ ಹಾಗೂ ಪ್ಲಾಸ್ಟಿಕ್​ನ ಮರುಬಳಕೆ ಹೇಗೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೆಂದು ಇಂದು ಹುಬ್ಬಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಲವಾರು ಸಂಘ ಸಂಸ್ಥೆಗಳು ಹಾಗೂ ವಿವಿಧ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

author img

By

Published : Oct 2, 2019, 7:58 PM IST

ಪ್ಲಾಸ್ಟಿಕ್ ನಿರ್ಬಂಧನೆ ಅರಿವು ಕಾರ್ಯಕ್ರಮ

ಹುಬ್ಬಳ್ಳಿ: ಅವಳಿ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ನಿರ್ಬಂಧನೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆ ಬ್ಯಾಗ್, ಪೇಪರ್ ಬ್ಯಾಗ್, ಮಡಿಕೆ ಕಪ್ಪುಗಳು ಮುಂತಾದ ಪ್ಯಾಕಿಂಗ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಮೇಳದಲ್ಲಿ ರಾಜ್ಯದ ವಿವಿಧಡೆಯಿಂದ ಆಗಮಿಸಿದ 45 ಪರಿಸರ ಸ್ನೇಹಿ ವಸ್ತುಗಳ ತಯಾರಕರು ಭಾಗವಹಿಸಿದ್ದರು. ಆಕರ್ಷಕವಾದ ಮಣ್ಣಿನ ಮಡಿಕೆಗಳು, ಬಿದಿರು, ಕಬ್ಬು, ಇತರೆ ವಸ್ತಗಳಿಂದ ತಯಾರಿಸಿದ ಬುಟ್ಟಿ, ಗೃಹ ಅಲಂಕಾರಿಕ ವಸ್ತಗಳು ಜನರನ್ನು ತಮ್ಮತ್ತ ಸೆಳೆದವು.

ಮೇಳದಲ್ಲಿ ಪ್ಲಾಸ್ಟಿಕ್ ಕುರಿತು ಅರಿವು: ಮೇಳದಲ್ಲಿ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಭಾಗವಹಿಸಿ, ಪ್ಲಾಸ್ಟಿಕ್ ಬಳಕೆ ಹಾಗೂ ಮರುಬಳಕೆ ಕುರಿತು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡಿದರು. ನಗರದ ಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ನಿತೀಶ್ ಕುಲಕರ್ಣಿ ಹಾಗೂ ಪ್ರಜ್ವಲ್ ಇಬ್ರಾಹಿಂಪುರ ಪ್ಲಾಸ್ಟಿಕ್ ಮರುಬಳಕೆ ಕುರಿತಾಗಿ ನೀಡುತ್ತಿದ್ದ ಪ್ರಾತ್ಯಕ್ಷಿಕೆ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತ್ತು. ಸರಳವಾಗಿ ಮನೆಯಲ್ಲಿ ದೊರಕುವ ಇಸ್ತ್ರಿಪೆಟ್ಟಿಗೆ, ಬಟರ್ ಪೇಪರ್ ಬಳಸಿ, 20 ಮೈಕ್ರಾನ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಕತ್ತರಿಸಿ ಒಂದರ ಮೇಲೆ ಒಂದು ಜೋಡಿಸಿ ತಯಾರಿಸಿದ ಅಚ್ಚುಗಳ ವಿವಿಧ ರೀತಿಯ ಬಳಕೆಯ ಬಗ್ಗೆ ಜನರಿಗೆ ತೋರಿಸಿದರು.

ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತಯಾರಿಸಬಹುದು ಪಾಲಿಫ್ಯುಯಲ್: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳನ್ನು ನಿರ್ದಿಷ್ಟ ಉಷ್ಣತೆಯಲ್ಲಿ ಸಂಸ್ಕರಿಸುವ ಮೂಲಕ ಪಾಲಿಫ್ಯುಯಲ್‌ನ ಪಡೆಯಬಹುದು. ಭವಿಷ್ಯದಲ್ಲಿ ಈ ಇಂಧನವನ್ನು ಪೆಟ್ರೋಲಿಯಂ ಉತ್ಪನ್ನ ಬದಲಿಗಾಗಿ ಉಪಯೋಗಿಸಬಹುದು ಎಂದು ವಿದ್ಯಾರ್ಥಿಗಳು ಜನರಿಗೆ ಮನದಟ್ಟು ಮಾಡಿದರು.

ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳಿಂದ ಬೋಧನಾ ಸಾಧನ ಸಾಮಗ್ರಿಗಳ ತಯಾರಿಕೆ: ಶಿಕ್ಷಕರು ತಮ್ಮ ವಿಜ್ಞಾನದ ಬೋಧನೆಯ ಸಂದರ್ಭದಲ್ಲಿ ಹೇಗೆ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಬೋಧನಾ ಸಾಧನ ಸಾಮಗ್ರಿಗಳನ್ನು ತಯಾರಿಸಬಹುದು ಎಂದು ಅಗಸ್ತ್ಯ ಫೌಂಡೇಷನ್ ವತಿಯಿಂದ ತೆರೆದ ಸ್ಟಾಲ್‌ನಲ್ಲಿ ತಿಳಿವಳಿಕೆ ನೀಡಲಾಯಿತು.

Intro:ಹುಬ್ಬಳ್ಳಿ-05

ಅವಳಿ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ನಿರ್ಬಂಧನೆ ಅರಿವು ಮೂಡಿಸುವ ಸಲುವಾಗಿ  ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆಯಬ್ಯಾಗ್, ಪೇಪರ್ ಬ್ಯಾಗ್, ಮಡಿಕೆ ಕಪ್ಪುಗಳು ಮುಂತಾದ ಪ್ಯಾಕಿಂಗ್  ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಮೇಳಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. 

ಮೇಳದಲ್ಲಿ ರಾಜ್ಯದ ವಿವಿಧಡೆಯಿಂದ ಆಗಮಿಸಿದ 45 ಪರಿಸರ ಸ್ನೇಹಿ ವಸ್ತಗಳ ತಯಾರಕರು ಭಾಗವಹಿಸಿದ್ದರು. ಆಕರ್ಷಕವಾದ ಮಣ್ಣಿನ ಮಡಿಕೆಗಳು, ಬಿದಿರು, ಕಬ್ಬು, ಇತರೆ ವಸ್ತಗಳಿಂದ ತಯಾರಿಸಿದ ಬುಟ್ಟಿ, ಗೃಹ ಅಲಂಕಾರ ವಸ್ತಗಳು ಜನರನ್ನು ತಮ್ಮತ್ತ ಸೆಳೆದವು.

*ಮೇಳದಲ್ಲಿ ಪ್ಲಾಸ್ಟಿಕ್ ಕುರಿತು ಅರಿವು*

ಮೇಳದಲ್ಲಿ ವಿದ್ಯಾರ್ಥಿಗಳು, ಸಂಘ ಸಂಸ್ಥಗಳು ಭಾಗವಹಿಸಿ ಪ್ಲಾಸ್ಟಿಕ್ ಬಳಕೆ ಹಾಗೂ ಮರುಬಳಕೆ ಕುರಿತು ಸಾರ್ವಜನಿಕರಿ ತಿಳಿಸುವ ಪ್ರಯತ್ನ ಮಾಡಿದರು.

*ವಿದ್ಯಾರ್ಥಿಗಳಿಗಳಿಂದ ಪ್ಲಾಸ್ಟಿಕ್ ಮರು ಬಳಕೆ ಕುರಿತು ಪ್ರಾತ್ಯಕ್ಷತೆ*

ನಗರದ ಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ನಿತೀಶ್ ಕುಲಕರ್ಣಿ ಹಾಗೂ ಪ್ರಜ್ವಲ್ ಇಬ್ರಾಹಿಂಪುರ ಪ್ಲಾಸ್ಟಿಕ್ ಮರುಬಳಕೆ ಕುರಿತಾಗಿ ನೀಡುತ್ತಿದ್ದ ಪ್ರಾತ್ಯಕ್ಷತೆ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತ್ತು.

ಸರಳವಾಗಿ ಮನೆಯಲ್ಲಿ ದೊರಕುವ ಇಸ್ತ್ರಿ ಪೆಟ್ಟಿಗೆ, ಬಟರ್ ಪೇಪರ್ ಬಳಸಿ , 20 ಮೈಕ್ರಾನ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ಕತ್ತರಿಸಿ ಒಂದರ ಮೇಲೆ ಒಂದು ಜೋಡಿಸಿ ತಯಾರಿಸಿದ ಅಚ್ಚುಗಳ ವಿವಿಧ ರೀತಿಯ ಬಳಕೆಯ ಬಗ್ಗೆ ಜನರಿಗೆ ತೋರಿಸಿದರು.

*ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತಯಾರಿಸಬಹುದು ಪಾಲಿಫ್ಯುಯಲ್*
   
ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳನ್ನು ನಿರ್ದಿಷ್ಟ ಉಷ್ಣತೆ ಸಂಸ್ಕರಿಸುವುರ ಮೂಲಕ ಪಾಲಿಫ್ಯುಯಲ್ ಯನ್ನು ಪಡೆಯಬಹುದು. ಭವಿಷ್ಯದಲ್ಲಿ ಈ ಇಂಧನವನ್ನು ಪೆಟ್ರೋಲಿಯಂ ಉತ್ಪನ್ನ ಬದಲಿಯಾಗಿ ಉಪಯೋಗಿಸಬಹುದು ಎಂದು ವಿದ್ಯಾರ್ಥಿಗಳು ಜನರಿಗೆ ಮನದಟ್ಟು ಮಾಡಿದರು.

*ಖಾಲಿ ಪ್ಲಾಸ್ಟಿಕ್ ಬಾಟಲ್ ಗಳಿಂದ ಬೋಧನಾ ಸಾಧನ ಸಾಮಗ್ರಿಗಳ ತಯಾರಿಕೆ*

ಶಿಕ್ಷಕರು ತಮ್ಮ ವಿಜ್ಞಾನದ ಬೋದನೆಯ ಸಂದರ್ಭದಲ್ಲಿ ಹೇಗೆ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಬೋಧನಾ ಸಾಧನ ಸಾಮಗ್ರಿಗಳನ್ನು ತಯಾರಿಸಬಹುದು ಎಂದು ಅಗಸ್ತ್ಯ ಪೌಡೇಷನ್ ನವರು ತೆರೆದ ಸ್ಟಾಲ್ ನಲ್ಲಿ ತಿಳಿವಳಿಕೆ ನೀಡಲಾಯಿತು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.