ETV Bharat / state

ಅತೃಪ್ತ ಶಾಸಕರು ಸಭೆ ಮಾಡಿದ್ದಾರೆ ಎಂಬ ವಿಚಾರ ಸುಳ್ಳು: ಬೆಲ್ಲದ - dharwad news

ಅತೃಪ್ತ ಶಾಸಕರು ಸಭೆ ಮಾಡಿದ್ದಾರೆ ಎಂಬುದು ನನಗೂ ಮಾಧ್ಯಮಗಳನ್ನು ನೋಡಿದಾಗಲೇ ತಿಳಿದಿದ್ದು, ಆ ರೀತಿಯ ಯಾವ ಸಭೆಯನ್ನು ಮಾಡಿಲ್ಲ. ಇದು ಸುಳ್ಳು ಎಂದು ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ.

Arvind bellad reaction about  rebel MLAs
ಅತೃಪ್ತ ಶಾಸಕರು ಸಭೆ ಮಾಡಿದ್ದಾರೆಂಬ ವಿಚಾರ ಸುಳ್ಳು
author img

By

Published : Aug 10, 2021, 5:39 PM IST

Updated : Aug 10, 2021, 7:38 PM IST

ಧಾರವಾಡ: ಅತೃಪ್ತ ಶಾಸಕರು ಸಭೆ ಮಾಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದ್ದಾರೆ. ‌ಅದು ತಪ್ಪು ಮಾಹಿತಿ, ಆ ರೀತಿಯ ಸಭೆ ಏನೂ ಆಗಿಲ್ಲ. ಸುಮ್ಮನೆ ಸಭೆ ಮಾಡಿದ್ದಾರೆ ಎಂದು ಮಾಹಿತಿ ಹರಿದಾಡುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ಮಾಧ್ಯಮಗಳಲ್ಲಿ ನೋಡಿದಾಗಲೇ ಗೊತ್ತಾಗಿದ್ದು. ಹೊಸ ಸಿಎಂ ಸಮರ್ಥ ಆಡಳಿತಗಾರ. ಅತ್ಯಂತ ಓದಿದ ಮೇಧಾವಿ, ಬುದ್ಧಿವಂತ ಸಿಎಂ, ಅತೀ ಹೆಚ್ಚು ಪುಸ್ತಕ ಓದಿದ ರಾಜಕಾರಣಿಗಳ ಟಾಪ್ ಲಿಸ್ಟ್‌ನಲ್ಲಿ ಅವರೂ ಇದ್ದಾರೆ. ಅವರು ನಮ್ಮ ಭಾಗದವರು ಅವರಿಂದ ಒಳ್ಳೆ ಕೆಲಸ ಆಗಲಿವೆ ಎಂದು ಹೇಳಿದರು.

ಅತೃಪ್ತ ಶಾಸಕರು ಸಭೆ ಮಾಡಿದ್ದಾರೆಂಬ ವಿಚಾರ ಸುಳ್ಳು: ಬೆಲ್ಲದ

ಸಚಿವ ಮುನೇನಕೊಪ್ಪ ಸಭೆಗೆ ಗೈರು ವಿಚಾರಕ್ಕೆ ಮಾತನಾಡಿದ ಅವರು, ಸಭೆಯ ಹಿಂದಿನ ದಿನವೇ ನನ್ನ ಜನ್ಮದಿನ ಇತ್ತು. ಹೀಗಾಗಿ ನಾನು ಊರಲ್ಲಿ ಇರಲಿಲ್ಲ, ಅವತ್ತು ಅವರ ಜೊತೆ ಮಾತನಾಡಿದ್ದೇ ಎಂದರು.

ಬೆಂಬಲಿಗರಿಂದ ಬ್ಯಾನರ್ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬ್ಯಾನರ್ ‌ಹರಿದಿರುವುದು ತಪ್ಪು. ಅವಸರದಲ್ಲಿ ಫೋಟೋ ಬಿಟ್ಟು ಹೋಗಿರಬಹುದಷ್ಟೇ ಉಳಿದೆಲ್ಲ ವಿಚಾರ ಪಕ್ಷದ ವೇದಿಕೆಗಳಲ್ಲಿ ಮಾತನಾಡುವೆ ಎಂದು ಉತ್ತರಿಸಿದರು.

Last Updated : Aug 10, 2021, 7:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.