ಹುಬ್ಬಳ್ಳಿ: ನಗರದ ಈದ್ಗಾ ಮೈದಾನದ ಹಣ್ಣಿನ ವ್ಯಾಪಾರಿ ಮೊಹಮ್ಮದ್ ಅಲಿ ಎಂ. ಕರಜಗಿ ಅವರು ಕಲ್ಲಂಗಡಿಯಲ್ಲಿ ‘ಈ ಸಲ ಕಪ್ ನಮ್ದೇ’ ಹಾಗೂ ಆರ್‌ಸಿಬಿ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಚಿತ್ರವನ್ನು ಅರಳಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಹೌದು, 20 ವರ್ಷಗಳಿಂದ ಹಣ್ಣಿನ ವ್ಯಾಪಾರದಲ್ಲಿ ತೊಡಗಿರುವ ಮೊಹಮ್ಮದ್, ಆರ್‌ಸಿಬಿ ತಂಡದ ಪಕ್ಕಾ ಅಭಿಮಾನಿ. ಶುಕ್ರವಾರ ಐಪಿಎಲ್ ಟೂರ್ನಿ ಆರಂಭವಾದ ಹಿನ್ನೆಲೆಯಲ್ಲಿ ಕಲ್ಲಂಗಡಿಯಲ್ಲಿ ಶುಭ ಹಾರೈಸಿದ್ದಾರೆ.
ಪ್ರತಿ ಸಲ ಐಪಿಎಲ್ ಟೂರ್ನಿ ಬಂದಾಗಲೆಲ್ಲ ತನ್ನ ನೆಚ್ಚಿನ ಆರ್‌ಸಿಬಿ ತಂಡಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರುವ ಮೊಹಮ್ಮದ್, ಈ ಬಾರಿ ಟ್ರೋಫಿ ಗೆಲ್ಲಲಿ ಎಂದು ಕಲ್ಲಂಗಡಿಯಲ್ಲಿ ಈ ಸಲ ಕಪ್ ನಮ್ದೇ ಎಂದು ಬರೆದು ತಂಡಕ್ಕೆ ಶುಭ ಕೋರಿದ್ದಾರೆ.
ಕಲಾಕೃತಿ ಕೆತ್ತನೆಗೆ ಮೂರು ತಾಸು ಸಮಯ ತೆಗೆದುಕೊಂಡಿರುವ ಮೊಹಮ್ಮದ್, ಈ ಹಿಂದೆ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿಯೂ ಕಲ್ಲಂಗಡಿಯಲ್ಲಿ ಟ್ರೋಫಿ ಚಿತ್ರ ಬಿಡಿಸಿದ್ದರು.
ಓದಿ : SSLC ಫಲಿತಾಂಶ ಹೆಚ್ಚಳಕ್ಕೆ ಪಣ : ಮಕ್ಕಳ ವ್ಯಾಸಂಗಕ್ಕೆ ನೆರವಾಗಲು TV ಬಂದ್ ಮಾಡಿದ ಗ್ರಾಮಸ್ಥರು