ಹುಬ್ಬಳ್ಳಿ: ಉದ್ಯಮಿ ಪುತ್ರ ಅಖಿಲ್ ಜೈನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿಯ ಗದ್ದೆಯೊಂದರಲ್ಲಿ ಹೂತಾಕಿದ್ದ ಅಖಿಲ್ ಶವವನ್ನು ಇಂದು ಪೊಲೀಸರು ಹೊರತೆಗೆದಿದ್ದಾರೆ.
ಮಂಗಳವಾರ ಸಂಜೆ ವೇಳೆ ಅಖಿಲ್ ಜೈನ್ ಶವ ಹೂತಾಕಿದ್ದ ಸ್ಥಳ ಪತ್ತೆ ಹಚ್ಚಲಾಗಿತ್ತು. ಕತ್ತಲಾದ ಕಾರಣ ಶವ ಹೊರತೆಗೆಯಲು ಆಗಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಶವವನ್ನು ಹೊರ ತೆಗೆದಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಇನ್ನು ಪಿಎಸ್ಐ ಸದಾಶಿವ ಕಾನಟ್ಟಿ ನೇತೃತ್ವದ ತಂಡ ಆರೋಪಿ ತಂದೆ ಭರತ್ ಜೈನ್ ಮಾಹಿತಿ ಮೇರೆಗೆ ಮಹಾದೇವ್ ನಾಲವಾಡ್, ಸಲೀಂ ಸಲಾವುದ್ದೀನ್ ಮೌಲ್ವಿ, ರೆಹಮಾನ್ ವಿಜಯಪುರ, ಪ್ರಭಯ್ಯ ಹಿರೇಮಠ, ಮಹಮ್ಮದ್ ಹನೀಫ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಉದ್ಯಮಿ ಪುತ್ರನ ಕೊಲೆ ಕೇಸ್: ಮಗನ ಹತ್ಯೆಗೆ ತಂದೆಯಿಂದ ಸುಪಾರಿ, ಶವ ಹೂತಿರುವ ಸ್ಥಳ ಪತ್ತೆ
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ವಿಠ್ಠಲ ಮಾದರ, ಶರಣಪ್ಪ ಕರೆಯಂಕನವರ, ಚಂದ್ರು ಲಮಾಣಿ, ಆನಂದ ಪೂಜಾರ, ಕೃಷ್ಣಾ ಕಟ್ಟಿಮನಿ, ಮೃತ್ಯುಂಜಯ ಕಾಲವಾಡ, ರಾಗಿ, ರಾಮಾಪುರ, ಸುನೀಲ ಭಾಗಿಯಾಗಿದ್ದರು.
ಇದನ್ನೂ ಓದಿ: ಉದ್ಯಮಿ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಗನ ಕೊಲೆಗೆ ತಂದೆಯಿಂದಲೇ ಸುಪಾರಿ?