ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ನಿನ್ನೆ ತಡರಾತ್ರಿ ನಟ ದರ್ಶನ್ ತೆರಳಿದ್ದರು.
ಭಾನುವಾರ ಬೆಳಗ್ಗೆ ನಟ ದರ್ಶನ್ ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡುವ ನಿರೀಕ್ಷೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದರ್ಶನ್ ಅಭಿಮಾನಿಗಳು ಶಿವಗಿರಿಯಲ್ಲಿರುವ ವಿನಯ್ ಮನೆ ಎದುರು ಜಮಾವಣೆಗೊಂಡಿದ್ದರು. ಆದರೆ, ಬೆಳಗ್ಗೆ ಭೇಟಿ ನೀಡಲು ಸಾಧ್ಯವಾಗದ ಹಿನ್ನೆಲೆ ಮಧ್ಯರಾತ್ರಿ 12 ಗಂಟೆಗೆ ವಿನಯ್ ಮನೆಗೆ ದರ್ಶನ್ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ ಎನ್ನಲಾಗುತ್ತಿದೆ.
ಓದಿ: ನಟ ಪವನ್ ಸಿಂಗ್ ಕುರಿತು ಆಕ್ಷೇಪಾರ್ಹ ವಿಡಿಯೋ ಪೋಸ್ಟ್ ಮಾಡಿದ ಕಿಡಿಗೇಡಿಗಳು : ಎಫ್‌ಐಆರ್ ದಾಖಲು
ನವೆಂಬರ್ 5ರಂದು ವಿನಯ್ ಕುಲಕರ್ಣಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ಸದ್ಯ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ.