ETV Bharat / state

ವಸತಿ ಯೋಜನೆ ಬಾಕಿ ಹಣ ಪಾವತಿಗೆ ಕ್ರಮ: ಶಾಸಕ ನಿಂಬಣ್ಣವರ ಭರವಸೆ

ಅತಿವೃಷ್ಟಿಯಿಂದಾಗಿ ಬಿದ್ದ ಮನೆ ನಿರ್ಮಿಸಲು ಸರ್ಕಾರ ಬಾಕಿ ಉಳಿಸಿಕೊಂಡ ಹಣವನ್ನು ಶೀಘ್ರವಾಗಿ ಅವರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಎಂ ನಿಂಬಣ್ಣವರ ಹೇಳಿದರು.

MLA Nimbannavar
ವಸತಿ ಯೋಜನೆ ಬಾಕಿ ಹಣ ಪಾವತಿಗೆ ಕ್ರಮ: ಶಾಸಕ ನಿಂಬಣ್ಣವರ
author img

By

Published : Jul 25, 2020, 8:23 AM IST

ಅಳ್ನಾವರ: ಕಳೆದ ವರ್ಷ ಪಟ್ಟಣದಲ್ಲಿ ಉಂಟಾದ ಅತಿವೃಷ್ಟಿಗೆ ಬಿದ್ದ ಮನೆ ನಿರ್ಮಿಸಲು, ಸರ್ಕಾರ ಬಾಕಿ ಉಳಿಸಿಕೊಂಡ ಹಣವನ್ನು ಶೀಘ್ರವಾಗಿ ಅವರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಎಂ ನಿಂಬಣ್ಣವರ ಹೇಳಿದರು.

ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎ ಮತ್ತು ಬಿ ಕೆಟಗೆರಿಯ 3.05 ಕೋಟಿ ರೂ.ಗಳನ್ನ ತಕ್ಷಣ ನೀಡಲಾಗುವುದು. ಬಾಕಿ ಉಳಿದ ಮನೆ ಬಾಡಿಗೆ ಹಣ ಸಹ ಒದಗಿಸಲಾಗುತ್ತದೆ. ಸಿ ಕೆಟೆಗೆರಿಯ 373 ಫಲಾನುಭವಿಗಳಿಗೆ ತಲಾ 50 ಸಾವಿರ ನೀಡಲಾಗಿದೆ ಎಂದರು.

ಈ ವೇಳೆ, ತಹಶೀಲ್ದಾರ್ ಅಮರೇಶ ಪಮ್ಮಾರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡ, ಪಿಎಸ್​ಐ ಎಸ್. ಆರ್. ಕಣವಿ, ಕೃಷಿ ಅಧಿಕಾರಿ ಸುನಂದಾ ಸಿತೊಳ್ಳಿ, ಎಂ.ಸಿ. ಹಿರೇಮಠ, ಅಮೂಲ ಗುಂಜೀಕರ, ಶಿವಾಜಿ ಡೊಳ್ಳಿನ, ಅಶೋಕ ಸಾವಂತ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.