ಹುಬ್ಬಳ್ಳಿ: ಬಹಳ ದಿನಗಳಿಂದ ತಣ್ಣಗಿದ್ದ ವಾಣಿಜ್ಯನಗರಿಯಲ್ಲಿ ಮತ್ತೆ ಮಾರಕಾಸ್ತ್ರಗಳು ಸದ್ದು ಮಾಡಿವೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನ ಮಗನಿಗೆ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿರುವ ಘಟನೆ ನಗರದ ಗಾರ್ಡನ್‌ಪೇಟೆ, ನ್ಯೂ ಇಂಗ್ಲೀಷ್ ಸ್ಕೂಲ್ ಹತ್ತಿರ ನಡೆದಿದೆ.
ಸಾದಿಕ್ ಬಿಕ್ಕನಬಾವಿ ಎಂಬುವವನೇ ಹಲ್ಲೆಗೆ ಒಳಗಾದ ವ್ಯಕ್ತಿ. ಸೈಯದ್ ಬಿಕ್ಕಿನಬಾವಿ ಎಂಬಾತ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇದನ್ನೊಮ್ಮೆ ನೋಡಿ! ಇವರು ಮನುಷ್ಯರಲ್ವೇ ಅಲ್ಲ ರಾಕ್ಷಸರು: ಮನೆ ಮಗಳ ರಕ್ತ ಹೀರುವ ವಿಷಜಂತುಗಳು!