ETV Bharat / state

ವೃದ್ಧಾಶ್ರಮ ಜಾಗ ಕಬಳಿಕೆ ಪ್ರಶ್ನಿಸಿದ ವ್ಯಕ್ತಿಯ ಕೊಲೆಗೆ ಸುಪಾರಿ ಆರೋಪ; ದೂರು ದಾಖಲು

ಕೇಶ್ವಾಪುರದ ಚರ್ಚ್ ಗೆ ಸಂಬಂಧಿಸಿದ ವೃದ್ಧಾಶ್ರಮದ ಜಾಗವನ್ನು ಕಬಳಿಸಲು ರಾಜು ಜೋಸೆಫ್ ಎಂಬಾತ ಮುಂದಾಗಿದ್ದ‌ ಎಂದು ಆರೋಪಿಸಲಾಗಿದೆ. ಈತನ ಈ ಅಕ್ರಮದ ವಿರುದ್ದ ಸ್ಟೀಫನ್ ಎಂಬಾತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ.‌ ಇದರಿಂದ ರೊಚ್ಚಿಗೆದ್ದ ರಾಜು ಜೋಸೆಫ್, ಮಹೇಶ ಹಾಗೂ ಇನ್ನೊಬ್ಬನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

accused-gave-the-supari-for-questioning-about-occupying-church-property
ವೃದ್ದಾಶ್ರಮ ಜಾಗ ಕಬಳಿಸಲು ಮುಂದಾದ ವ್ಯಕ್ತಿಯನ್ನ ಪ್ರಶ್ನಿಸಿದ್ದಕ್ಕೆ ಕೊಲೆಗೆ ಸುಪಾರಿ!
author img

By

Published : Jan 24, 2021, 4:23 PM IST

Updated : Jan 24, 2021, 4:52 PM IST

ಹುಬ್ಬಳ್ಳಿ: ವೃದ್ಧಾಶ್ರಮದ ಆಸ್ತಿ ಕಬಳಿಸಲು ಮುಂದಾಗಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಕೊಲೆಗೆ ಸುಪಾರಿ ನೀಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಕೇಶ್ವಾಪುರದ ಚರ್ಚ್​ಗೆ ಸಂಬಂಧಿಸಿದ ವೃದ್ಧಾಶ್ರಮದ ಜಾಗವನ್ನು ಕಬಳಿಸಲು ರಾಜು ಜೋಸೆಫ್ ಎಂಬಾತ ಮುಂದಾಗಿದ್ದ ಎಂದು ಆರೋಪಿಸಲಾಗಿದೆ‌. ಈತನ ಈ ಅಕ್ರಮದ ವಿರುದ್ದ ಸ್ಟೀಫನ್ ಎಂಬಾತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ.‌ ಇದರಿಂದ ರೊಚ್ಚಿಗೆದ್ದ ರಾಜು ಜೋಸೆಫ್, ಸ್ಟೀಫನ್​ನನ್ನು ಕೊಲೆ ಮಾಡಲು ಮಹೇಶ ಹಾಗೂ ಇನ್ನೊಬ್ಬನಿಗೆ ಸುಪಾರಿ ನೀಡಿದ್ದಾನೆ ಎಂದು ಸ್ಟೀಫನ್ ಸಂಬಂಧಿಗಳು ಆರೋಪಿಸಿದ್ದಾರೆ.

ಸ್ಟೀಫನ್ ಸಂಬಂಧಿ ಆನಂದ ಮಾತು

ಓದಿ: ರಸ್ತೆ ಅಪಘಾತ: ಆರ್​ಎಸ್​ಎಸ್ ಮುಖಂಡ ದೇಶಪಾಂಡೆ ವಿಧಿವಶ

ಕೇಶ್ವಾಪುರದ ಸ್ಟೀಫನ್ ಅವರ ವಾಚ್ ಅಂಗಡಿಗೆ ನುಗ್ಗಿದ ಮಹೇಶ ಹಾಗೂ ಇನ್ನೊಬ್ಬ ಸಹಚರ ಹಲ್ಲೆಗೆ ಮುಂದಾಗಿದ್ದಾರೆ. ಆಗ ಎಚ್ಚೆತ್ತುಕೊಂಡ ಸ್ಟೀಫನ್ ಅಂಗಡಿಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಇವೆಲ್ಲ ದೃಶ್ಯಗಳು ಅಂಗಡಿಯ‌ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕ್ಯಾರಿಬ್ಯಾಗ್​ನಲ್ಲಿ ಮಾರಕಾಸ್ತ್ರ ತೆಗೆದುಕೊಂಡು ಬಂದು ಕೊಲೆಗೆ ಯತ್ನಿಸಲಾಗಿದೆ ಎಂದು ಸ್ಟೀಫನ್ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ‌ ದೂರು ನೀಡಿದ್ದಾರೆ.

Last Updated : Jan 24, 2021, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.