ETV Bharat / state

ಕರ್ನಾಟಕದಲ್ಲಿ 40 ಪರ್ಸೆಂಟ್​ ಸರ್ಕಾರ ಕಿತ್ತೊಗೆಯಲು ಆಪ್​ ಬಲವರ್ಧನೆ: ಅರವಿಂದ ಕೇಜ್ರಿವಾಲ್ - ಆಮ್​ ಆದ್ಮಿ ಪಕ್ಷ

ಕರ್ನಾಟಕದಲ್ಲೂ ಆಮ್​ ಆದ್ಮಿ ಪಕ್ಷದ ಧ್ವಜ ಸ್ಥಾಪಿಸಲು ರಾಜ್ಯಕ್ಕೆ ಆಗಮಿಸಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​.

Delhi Chief Minister Arvind Kejriwal
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
author img

By

Published : Mar 4, 2023, 2:15 PM IST

Updated : Mar 4, 2023, 3:57 PM IST

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಹುಬ್ಬಳ್ಳಿ: ಕರ್ನಾಟಕದಲ್ಲಿ 40 ಪರ್ಸೆಂಟೇಜ್ ಸರ್ಕಾರವಿದೆ. ತಾವು 40 ಪರ್ಸೆಂಟ್​ ಸರ್ಕಾರ ಎನ್ನುವುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ. ಕರ್ನಾಟಕದಲ್ಲಿರುವ 40 ಪರ್ಸೆಂಟ್​ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಗೆಯಬೇಕು. ಆ ನಿಟ್ಟಿನಲ್ಲಿ ಆಮ್​ ಆದ್ಮಿ ಪಕ್ಷವನ್ನು ಬಲವರ್ಧನೆ ಮಾಡುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ​ಹೇಳಿದ್ದಾರೆ.

ಶುಕ್ರವಾರ ತಡರಾತ್ರಿ ರಾಜ್ಯಕ್ಕೆ ಆಗಮಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ನಗರದ ಖಾಸಗಿ ಹೋಟೆಲ್​ನಲ್ಲಿ ದಾವಣಗೆರೆಗೆ ತೆರಳುವ ಮುನ್ನ ಮಾತನಾಡಿ, ದೆಹಲಿಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾವ ರೀತಿಯ ಬದಲಾವಣೆಗಳಾಗಿವೆ ಎಂಬುದು ಅಂತ ಜನರಿಗೆ ಗೊತ್ತಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಕೊಟ್ಟಂತೆ ಕರ್ನಾಟಕದಲ್ಲಿಯೂ ಪ್ರಾಮಾಣಿಕ ಸರ್ಕಾರವನ್ನು ನಾವು ನಡೆಸುತ್ತೇವೆ. ಆ ನಿಟ್ಟಿನಲ್ಲಿ ಆಮ್​ ಆದ್ಮಿ ಪಕ್ಷವನ್ನು ಬಲವರ್ಧನೆ ಮಾಡ್ತೇವೆ ಎಂದರು.

ದೆಹಲಿ ಮುಖ್ಯಮಂತ್ರಿ ಜೊತೆಗೆ ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರೂ ರಾಜ್ಯಕ್ಕೆ ಆಗಮಿಸಿದ್ದು, ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈತರು ಯಾವ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೋ ಅದೇ ರೀತಿಯ ಸಮಸ್ಯೆಗಳು ಪಂಜಾಬ್​ನಲ್ಲಿವೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಾಯ್ದೆಗಳನ್ನು ವಾಪಸ್​ ಪಡೆದಿಲ್ಲ. ಇಲ್ಲಿನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪಂಜಾಬ್​ ರಾಜ್ಯದಲ್ಲಿ ನಾವು ಓಪಿಎಸ್​ ಜಾರಿಗೆ ತಂದಿದ್ದೇವೆ. ಆದರೆ ಕರ್ನಾಟಕದಲ್ಲಿ ಇನ್ನೂ ಒಪಿಎಸ್​ ಜಾರಿಗೆ ತಂದಿಲ್ಲ. ಕರ್ನಾಟಕದ ರೈತರ ಸಮಸ್ಯೆಗಳನ್ನು ಆಮ್​ ಆದ್ಮಿ ಪಕ್ಷ ಬಗೆಹರಿಸುತ್ತದೆ. ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ತರುತ್ತೇವೆ. ರಾಜ್ಯದ ಜನರಿಗೆ ಉಚಿತ ವಿದ್ಯುತ್​, ನಿರುದ್ಯೋಗ ಸಮಸ್ಯೆ ನಿವಾರಣೆ, ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಪಂಜಾಬ್​ ಮತ್ತು ದೆಹಲಿ ಮಾದರಿಯಲ್ಲಿ ಇಲ್ಲಿಯ ಜನರೂ ಕೂಡ ಆಮ್​ ಆದ್ಮಿ ಪಕ್ಷಕ್ಕೆ ಬಹುಮತ ನೀಡಿ, ಸರ್ಕಾರ ರಚಿಸುವ ಅವಕಾಶವನ್ನು ನೀಡಬೇಕು ಎಂದು ಹೇಳಿದರು.

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನದವರಿಂದ ಹಿಂದೂ ದೇವಸ್ಥಾನ ಧ್ವಂಸ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ನಾವು ಭ್ರಾತೃತ್ವ ಭಾವನೆಯಿಂದ ಎಲ್ಲರೂ ಜೊತೆಯಾಗಿ ಇದ್ದೇವೆ. ಇಲ್ಲಿ ಆ ರೀತಿ ಆಗಿಲ್ಲ. ಖಲಿಸ್ತಾನ ಪ್ರತ್ಯೇಕತೆ ಹೋರಾಟದ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದರು.

ದೆಹಲಿ, ಪಂಜಾಬ್​ ನಂತರ ಕರ್ನಾಟಕದಲ್ಲಿ ಪಾರುಪತ್ಯ ಸಾಧಿಸಲು ರಾಜ್ಯಕ್ಕೆ ಭೇಟಿ ನೀಡಿರುವ ಅರವಿಂದ ಕೇಜ್ರಿವಾಲ್​ ದಾವಣೆಗೆರೆಯಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ, ಯಾತ್ರೆಗೆ ಚಾಲನೆ ನೀಡಲಿದ್ದಾರೆ. ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಂಜೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅರವಿಂದ್​ ಕೇಜ್ರಿವಾಲ್​ ಹಾಗೂ ಭಗವಂತ್​ ಮಾನ್​ ಭಾಗಿಯಾಗಲಿದ್ದಾರೆ. ಚುನಾವಣಾ ಯಾತ್ರೆಯನ್ನು ಆರಂಭಿಸುವುದಷ್ಟೇ ಅಲ್ಲದೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ರಾಜ್ಯದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಕೇಜ್ರಿವಾಲ್ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ: ಮುಖ್ಯಮಂತ್ರಿ ಚಂದ್ರು

Last Updated : Mar 4, 2023, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.