ಹುಬ್ಬಳ್ಳಿ: ನಗರದಲ್ಲಿ ಮಹಿಳಾ ಪೇದೆಯೊಬ್ಬರು ಸಾಂಸಾರಿಕ ಕಲಹದಿಂದ ಇದೀಗ ಸುದ್ದಿಯಾಗಿದ್ದಾರೆ. ಪೇದೆಯ ಪತಿ ಮನೆಗೆ ಬೇಕಾದಷ್ಟು ದಿನಸಿ ವಸ್ತುಗಳನ್ನು ತರದಿದ್ದಕ್ಕೆ ರೊಚ್ಚಿಗೆದ್ದ ಪತ್ನಿ ಗಂಡ ಹಾಗೂ ಅತ್ತೆಯನ್ನ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ಸದ್ಯ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿರುವ ಕಸ್ತೂರಿ ಛಲವಾದಿ ತನ್ನ ಗಂಡ ಬಸವರಾಜ ಗೋಕಾವಿ ಹಾಗೂ ಅತ್ತೆಯನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗಂಡ ಹಾಗೂ ಅತ್ತೆಯ ಮೇಲೆ ಹಲ್ಲೆ ನಡೆಸಿರುವ ಪತ್ನಿಯ ವಿರುದ್ಧ ಗಂಡ ದೂರು ನೀಡಲು ಮುಂದಾದರೂ ಪೊಲೀಸರು ಮಾತ್ರ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲವೆಂದು ಪೇದೆಯ ಗಂಡ ಆರೋಪ ಮಾಡುತ್ತಿದ್ದಾರೆ.
ಆದರೆ ಗಂಡ ಏನು ಕೆಲಸ ಮಾಡದೇ ದುಡಿಯದೇ ಮನೆಯಲ್ಲಿ ಇರುತ್ತಾರೆ. ಸದಾ ಸಂಶಯ ಪಡ್ತಾರೆ ಎಂದು ಪತ್ನಿ ಇದೇ ವೇಳೆ ಆರೋಪಿಸಿದ್ದಾಳೆ.