ETV Bharat / state

ಹುಬ್ಬಳ್ಳಿಯಲ್ಲಿ ಸತತ ಮಳೆಗೆ ಧರೆಗುರುಳಿತು ಬೃಹತ್​ ಮರ: 2 ಮನೆ, ಬೈಕ್ ಭಾಗಶಃ ಜಖಂ - hubli rain news

ನಿರಂತರವಾಗಿ ಸುರಿದ ಮಳೆಯ ಪರಿಣಾಮ, ನಗರದ ಗೋಕುಲ್​ ರಸ್ತೆಯಲ್ಲಿನ ರೇಣುಕಾನಗರದ 7ನೇ ಕ್ರಾಸ್​​ನಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ.

tree fell down due to rain
ಧರೆಗುರುಳಿದ ಮರ
author img

By

Published : Jun 13, 2021, 5:43 PM IST

ಹುಬ್ಬಳ್ಳಿ: ನಗರದಲ್ಲಿ ಸತತವಾಗಿ ಮಳೆ ಸುರಿದ ಪರಿಣಾಮ ನಗರದ ಗೋಕುಲ ರಸ್ತೆಯಲ್ಲಿನ ರೇಣುಕಾನಗರದ 7 ನೇ ಕ್ರಾಸ್​​ನಲ್ಲಿ ಬೃಹತ್ ಗಾತ್ರದ ಮರ ಬುಡಸಮೇತ ಉರುಳಿಬಿದ್ದಿದೆ. ಹೀಗಾಗಿ ಅಕ್ಕಪಕ್ಕದ ಎರಡು ಮನೆಗಳು, ಬೈಕ್ ಭಾಗಶಃ ಜಖಂ ಆಗಿವೆ.

ಲಾಕ್​ಡೌನ್​ ಇರುವುದರಿಂದ ಮನೆ ಜನಸಂಚಾರ ಕಡಿಮೆ ಇದೆ. ಹೀಗಾಗಿ ಭಾರಿ ಅನಾಹುತ ತಪ್ಪಿದೆ. ಮರ ಬಿದ್ದಿದ್ದರಿಂದ ವಾಹನಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ಅನೇಕ ದಿನಗಳಿಂದ ಬೃಹತ್​​ ಮರಗಳನ್ನು(ದೀರ್ಘಾವಧಿಯ ಮರ) ತೆಗೆಯಲು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮುಂಗಾರು ಚುರುಕು : ಎಡೆಬಿಡದೆ ಸುರಿಯುತ್ತಿರುವ ಮಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.