ETV Bharat / state

ಧಾರವಾಡದಲ್ಲಿ ಎರಡು ಪ್ರತ್ಯೇಕ ಬೈಕ್​​ ಅಪಘಾತ: ಮೂವರು ಬಲಿ

ಎರಡು ಪ್ರತ್ಯೇಕ ಬೈಕ್​ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

author img

By

Published : Jun 11, 2020, 8:03 AM IST

bike accident
ಬೈಕ್​ ಅಪಘಾತ

ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಪೀರಗಣಿ ದರ್ಗಾ ಕ್ರಾಸ್ ಬಳಿ ಬೈಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಧಾರವಾಡದ ಮದಾರಮಡ್ಡಿಯ ಯುವಕರು ಎನ್ನಲಾಗುತ್ತಿದೆ. ಧಾರವಾಡ ಕಡೆಗೆ ಇವರು ಬೈಕ್ ತೆಗೆದುಕೊಂಡು ಬರುತ್ತಿದ್ದ ವೇಳೆ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಸ್ಥಳದಲ್ಲಿ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

ಬೈಕ್​ ಅಪಘಾತ

ಬ್ಯಾರಿಕೇಡ್​ಗೆ ಬೈಕ್ ಡಿಕ್ಕಿಯಾಗಿ​ ಸವಾರ ಸಾವು

ಮತ್ತೊಂದು ಪ್ರಕರಣದಲ್ಲಿ ಆರ್​ಟಿಎಸ್ ಬ್ಯಾರಿಕೇಡ್​​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ಧಾರವಾಡ - ಹುಬ್ಬಳ್ಳಿ ರಸ್ತೆಯ ರಾಯಾಪುರ ಬಳಿ ನಡೆದಿದೆ.

ರಾತ್ರಿ ಘಟನೆ ನಡೆದಿದ್ದು, ಮೃತ ಬೈಕ್​ ಸವಾರನ ಮಾಹಿತಿ ಲಭ್ಯವಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಧಾರವಾಡದ ಸಂಚಾರ ಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.