ETV Bharat / state

ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಅಣ್ಣನನ್ನು ಕೊಂದು ಆತ್ಮಹತ್ಯೆ ನಾಟಕವಾಡಿದ ತಮ್ಮ - ಹುಬ್ಬಳ್ಳಿ ಅಪರಾಧ

ಪಾನಮತ್ತನಾಗಿ‌ ಮನೆಗೆ ಬಂದಿದ್ದ ವ್ಯಕ್ತಿ, ಆಸ್ತಿ ಹಾಗೂ ಮನೆಯಲ್ಲಿ ತನಗೆ ಪಾಲು ಕೊಡುವಂತೆ ತಾಯಿ‌ ಜತೆ ಜಗಳವಾಡಿ‌ ಹಲ್ಲೆ ನಡೆಸಿದ್ದಾನೆ. ಈ ವೇಳೆ ಕುಪಿತನಾಗಿ ತನ್ನ ಸ್ವಂತ ಅಣ್ಣನನ್ನೇ ಕೊಂದುಹಾಕಿದ್ದಾನೆ.

A man killed his own brother at hubli
ಕ್ಷುಲ್ಲಕ ಕಾರಣಕ್ಕೆ ಅಣ್ಣನನ್ನೇ ಕೊಂದ ತಮ್ಮ
author img

By

Published : May 11, 2020, 9:40 AM IST

Updated : May 11, 2020, 10:19 AM IST

ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ತಮ್ಮ ಸ್ವಂತ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಮಾವನೂರಿನಲ್ಲಿ ನಡೆದಿದೆ.

ಮಂಜುನಾಥ ಸುಳ್ಳದ ಕೊಲೆಯಾದ ವ್ಯಕ್ತಿ. ಆರೋಪಿ ಕಲ್ಮೇಶ ಸುಳ್ಳದನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೇ 9ರಂದು ಪಾನಮತ್ತನಾಗಿ‌ ಮನೆಗೆ ಬಂದಿದ್ದ ಕಲ್ಮೇಶ, ಆಸ್ತಿ ಹಾಗೂ ಮನೆಯಲ್ಲಿ ತನಗೆ ಪಾಲು ಕೊಡುವಂತೆ ತಾಯಿ‌ ಶಿವಲಿಂಗವ್ವ ಜತೆ ಜಗಳವಾಡಿ‌ ಹಲ್ಲೆ ನಡೆಸಿದ್ದಾನೆ.

ಜಗಳ ಅತಿರೇಕಕ್ಕೆ ಹೋಗಿ ತನ್ನ ಅಣ್ಣನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ, ಶವವನ್ನು ಜಮೀನಿಗೆ ಹೊತ್ತುಕೊಂಡು ಹೋಗಿ, ಹುಣಸೆ ಮರಕ್ಕೆ ನೇತು ಹಾಕಿ, ಅಣ್ಣ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Last Updated : May 11, 2020, 10:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.