ಹುಬ್ಬಳ್ಳಿ: ಐಪಿಎಲ್ ಕ್ರಿಕೆಟ್ ಪ್ರಾರಂಭವಾಗಿದ್ದು, ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಹೆಚ್ಚಾಗಿದೆ. ಕ್ರಿಕೆಟ್ ಬೆಟ್ಟಿಂಗ್ ಆಡುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಪೊಲೀಸರನ್ನು ಯಮಾರಿಸಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಆರೋಪಿಯನ್ಜು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಣೇಶ ಅಣ್ಣಪ್ಪ ನವಲೂರ ಬಂಧಿತ ಆರೋಪಿಯಾಗಿದ್ದು, ಈತನಿಂದ ಒಂದು ಮೊಬೈಲ್ ಹಾಗೂ 12,500 ರೂ ನಗದು ಹಣ ಮತ್ತು ಒಂದು ಪೆನ್ನು & ನೋಟಪುಸ್ತಕವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
12 ರಂದು ಹುಬ್ಬಳ್ಳಿ ಶಹರ ಪೊಲೀಸ ಠಾಣೆ ವ್ಯಾಪ್ತಿಯ ಮೇದಾರ ಓಣಿ ಸರ್ಕಲ್ ಹತ್ತಿರ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಎಲಿವನ್ ಪಂಜಾಬ ಟೀಮಗಳ ಮಧ್ಯ ನಡೆದ ಐಪಿಎಲ್ ಪಂದ್ಯಾವಳಿ ಮೇಲೆ ಕ್ರಿಕೇಟ ಬೆಟ್ಟಿಂಗ್ ಆಡುತ್ತಿದ್ದ. ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.