ETV Bharat / state

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಮನೆ, ಅಂಗಡಿಗಳಿಗೆ ಗುದ್ದಿದ ಕಂಟೇನರ್​ - Dharwad Latest News Update

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಪಂಚಾಯಿತಿ ಎದುರು ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್​ವೊಂದು ರಸ್ತೆಯ ಪಕ್ಕದಲ್ಲಿನ ಅಂಗಡಿ ಸೇರಿದಂತೆ ಮನೆಗಳಿಗೆ ಗುದ್ದಿದ್ದು, ಮನೆಗಳು ಜಖಂ ಆಗಿವೆ. ಅಪಘಾತದಿಂದ ಬಾರಿ ಪ್ರಮಾಣದ ಹಾನಿಯುಂಟಾಗಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

A lorry colloids houses and shops in Dharwad
ಚಾಲಕನ ನಿಯಂತ್ರಣ ತಪ್ಪಿ ಮನೆ, ಅಂಗಡಿಗಳಿಗೆ ಗುದ್ದಿದ ಲಾರಿ... ತಪ್ಪಿದ ಅನಾಹುತ
author img

By

Published : Dec 17, 2020, 11:43 AM IST

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್​ವೊಂದು ರಸ್ತೆ ಪಕ್ಕದಲ್ಲಿರುವ ಜೆರಾಕ್ಸ್ ಅಂಗಡಿ ಸೇರಿದಂತೆ ಮನೆಗಳಿಗೆ ಗುದ್ದಿದ ಘಟನೆ ನವಲಗುಂದ ತಾಲೂಕು ಪಂಚಾಯಿತಿ ಎದುರು ಇಂದು ಬೆಳಗ್ಗೆ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಮನೆ, ಅಂಗಡಿಗಳಿಗೆ ಗುದ್ದಿದ ಕಂಟೇನರ್

ಅಪಘಾತ ಬೆಳ್ಳಂಬೆಳಗ್ಗೆ ನಡೆಡಿದ್ದು, ಅಂಗಡಿ ಮತ್ತು ಮನೆಯ ಹೊರಗೆ ಯಾರು ಇಲ್ಲದ ಹಿನ್ನೆಲೆ ಭಾರಿ ಅನಾಹುತ ತಪ್ಪಿದೆ. ಅಂಗಡಿ ಸೇರಿದಂತೆ ಮನೆಗಳಿಗೆ ಬಾರಿ ಪ್ರಮಾಣದ ಹಾನಿಯುಂಟಾಗಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿದ್ದಾರೆ.

ಮನೆಗೆ ಟ್ಯಾಂಕರ್ ನುಗ್ಗಿದ ಪರಿಣಾಮ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ‌ಇದರಿಂದ ಎರಡು ಮನೆಗಳು ಜಖಂಗೊಂಡಿದ್ದು, ವಾಹನದ ಮುಂಭಾಗ ಸಹ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಲಬುರಗಿಯಿಂದ ಕುಂದಾಪುರಕ್ಕೆ ಹೊರಟಿದ್ದ ಕಂಟೇನರ್​ ನಿಯಂತ್ರಣ ತಪ್ಪಿ ಮನೆ ಮತ್ತು ಅಂಗಡಿಗೆ ನುಗ್ಗಿದೆ. ಹೆಬಸೂರ ಮತ್ತು ತೋಟದ ಎನ್ನುವವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.