ಧಾರವಾಡ: ಇಲ್ಲಿನ ಕಲಾವಿದನೊಬ್ಬ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ವಿಶಿಷ್ಟವಾದ ಕಲಾಕೃತಿ ರಚನೆ ಮಾಡಿ, ಅವರಿಗೆ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೌಂಟ್ಡೌನ್ ಶುರುವಾಗಿದೆ. ಜಗತ್ತಿನ ಪ್ರಮುಖ ದೇಶಗಳ ಗಣ್ಯಾತಿಗಣ್ಯರು ಅವರ ಪ್ರಮಾಣ ವಚನಕ್ಕೆ ಆಗಮಿಸುತ್ತಿದ್ದಾರೆ. ಆದ್ರೆ ಧಾರವಾಡದ ಕಲಾವಿದನೊಬ್ಬ ವಿಶಿಷ್ಟವಾದ ರೀತಿಯಲ್ಲಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಕಲಾಕೃತಿ ರಚನೆ ಮಾಡಿದ್ದಾರೆ. ಕೆಲಗೇರಿ ಕಲಾವಿದನೊಬ್ಬ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ಕಲಾಕೃತಿ ರಚಿಸಿ ಅಭಿಮಾನ ಮೆರೆದಿದ್ದಾರೆ. ಮಣ್ಣಿನಲ್ಲಿ 19 ಇಂಚಿನ ಮೂರ್ತಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿ, ಅವರು ಮಾಡಿರುವ ಕೆಲಸದಿಂದ 2019ರಲ್ಲಿ ಮತ್ತೆ ಪ್ರಧಾನಿಯಾಗುತ್ತಿರುವುದಕ್ಕೆ ಸಂತಸಗೊಂಡಿರುವ ಕಲಾವಿದ ಮಂಜುನಾಥ ಹಿರೇಮಠ 19 ಇಂಚಿನ ಮೋದಿ ಅವರ ಕಲಾಕೃತಿ ರಚಿಸಿ ಶುಭ ಕೋರಿದ್ದಾರೆ.