ಧಾರವಾಡ: ಡ್ರಾಪ್ ಕೊಡುವ ನೆಪದಲ್ಲಿ ಬೈಕ್ನಲ್ಲಿ ಹತ್ತಿಸಿಕೊಂಡು ಹೋಗಿ ಹಣ ದೋಚಿದ ಆರೋಪಿಯೊಬ್ಬನನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ತಡಸಿನಕೊಪ್ಪ ಗ್ರಾಮದ ನಿವಾಸಿ ಗೋವಿಂದ ಭೀಮಪ್ಪ ಬಂಗಾರಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಧಿತನಿಂದ ಹೆಚ್ಎಫ್ ಡಿಲಕ್ಸ್ ಬೈಕ್, ನಗದು ಹಣ ಸೇರಿದಂತೆ ಒಟ್ಟು 53 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಉದ್ಯಯಮನಗರದ ನಿವಾಸಿ ಪರಮೇಶ್ವರ್ ಶಂಕರನಾರಾಯಣ್ ಎಂಬಾತರು ಧಾರವಾಡದ ಕಲಘಟಗಿ ರಸ್ತೆಯ ವಿಜಯಾ ಬ್ಯಾಂಕ್ ಹತ್ತಿರ ತಮ್ಮ ಊರಿಗೆ ಹೋಗಲು ನಿಂತುಕೊಂಡಾಗ ಡ್ರಾಪ್ ಕೊಡುವ ನೆಪದಲ್ಲಿ ಅವರನ್ನು ಹೊಡೆದು ಹಣ ಎಗರಿಸಿಕೊಂಡು ಹೋಗಿದ್ದ.
ಈ ಕುರಿತು ಪರಮೇಶ್ವರ್ ಅವರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.