ETV Bharat / state

ಬಿಡದೇ ಸುರಿದ ಮಳೆಗೆ ತತ್ತರಿಸಿದ ಹೆಸ್ಕಾಂ: ವಿದ್ಯುತ್ ಸರಬರಾಜು ಕಂಪನಿಗೆ 94,96 ಲಕ್ಷ ರೂ. ನಷ್ಟ - electricity supply company of hubli

ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ರೈತರು ಬೆಳೆದ ಬೆಳೆಗಳು ಹಾನಿ ಆಗಿರುವುದು ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಎಲ್ಲರ ಮನೆಗೆ ಬೆಳಕು ಚೆಲ್ಲುವ ವಿದ್ಯುತ್ ಸರಬರಾಜು ಕಂಪನಿ ಕೂಡ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ಬಿಡದೆ ಸುರಿದ ಮಳೆಗೆ ತತ್ತರಿಸಿದ ಹೆಸ್ಕಾಂ
ಬಿಡದೆ ಸುರಿದ ಮಳೆಗೆ ತತ್ತರಿಸಿದ ಹೆಸ್ಕಾಂ
author img

By

Published : Sep 15, 2022, 2:37 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲೂಕಿನಲ್ಲಿ ಸುರಿದ ಮಳೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ 94,96 ಲಕ್ಷ ರೂ. ನಷ್ಟ ಉಂಟಾಗಿದೆ. ಅತಿವೃಷ್ಟಿಯಿಂದ ಏಪ್ರಿಲ್ 1ರಿಂದ ಆಗಸ್ಟ್ 31ರವರೆಗೆ 1,549 ವಿದ್ಯುತ್ ಕಂಬ, 33 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾಳಾಗಿವೆ. ಸತತ ಮಳೆ ಸುರಿದರೂ ಯಾವುದೇ ಗ್ರಾಮ ಕತ್ತಲೆಯಲ್ಲಿ ಮುಳುಗಿಲ್ಲ ಎಂಬುದು ಸಮಾಧಾನದ ಸಂಗತಿ.

ಬಿಡದೆ ಸುರಿದ ಮಳೆಗೆ ತತ್ತರಿಸಿದ ಹೆಸ್ಕಾಂ

ನವಲಗುಂದ, ಅಣ್ಣಿಗೇರಿ ಭಾಗದಲ್ಲಿ ಸತತ ಮಳೆ ಸುರಿದರೂ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉಪಕರಣಗಳಿಗೆ ಧಕ್ಕೆಯಾಗಿದೆ. ಧಾರವಾಡ, ಹುಬ್ಬಳ್ಳಿ, ಶಹರ, ಕಲಘಟಗಿ, ಕುಂದಗೋಳ ಭಾಗದಲ್ಲಿ ವಿದ್ಯುತ್ ಕಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲಕ್ಕುರುಳಿವೆ.

ಧಾರವಾಡ ಮತ್ತು ಹುಬ್ಬಳ್ಳಿ ಶಹರದಲ್ಲಿ ಮಾತ್ರ ವಿದ್ಯುತ್‌ ಪರಿವರ್ತಕಕ್ಕೆ ಧಕ್ಕೆಯಾಗಿದೆ. ಬೆಣ್ಣಿಹಳ್ಳ, ತುಪ್ಪರಿಹಳ್ಳದ ಕೇಂದ್ರ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿ ವಿವಿಧ ಗ್ರಾಮಗಳು ಬಹಳಷ್ಟು ಸಮಸ್ಯೆ ಎದುರಿಸಿವೆ. ಈ ವೇಳೆ ಕೆಲ ಕಾಲ ವಿದ್ಯುತ್‌ ಸಂಪರ್ಕ, ಕಡಿತಗೊಳಿಸಲಾಗಿತ್ತು ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

ಇದನ್ನೂ ಓದಿ: ಸರ್ಕಾರಿ ಇಲಾಖೆಯಿಂದಲೇ ಹೆಸ್ಕಾಂಗೆ ಸಂಕಷ್ಟ.. ₹546 ಕೋಟಿ ಬಾಕಿ ಪಾವತಿಸದ ಕಾರಣ ಗ್ರಾಹಕರ ಮೇಲೆ ಬೀಳಲಿದೆ ಹೊರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.