ETV Bharat / state

ಪಾರ್ಸಲ್‌ ಹೆಸರಿನಲ್ಲಿ ದೋಖಾ: ಹುಬ್ಬಳ್ಳಿಯಲ್ಲಿ ಯುವಕನಿಗೆ 5 ಲಕ್ಷಕ್ಕೂ ಹೆಚ್ಚು ಹಣ ವಂಚನೆ

ವಿದೇಶದಿಂದ ದುಬಾರಿ ಗಿಫ್ಟ್​ ಪಾರ್ಸಲ್​ ಬಂದಿದೆ ಹೇಳಿ ಹುಬ್ಬಳ್ಳಿ ಮೂಲದ ಯುವಕನೊಬ್ಬನನ್ನು ಯಾಮಾರಿಸಿ 5 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

5 lakhs frauded in the name od parcel
ಯುವಕನಿಗೆ 5 ಲಕ್ಷಕ್ಕೂ ಹೆಚ್ಚು ಹಣ ವಂಚನೆ
author img

By

Published : Oct 20, 2020, 11:46 AM IST

ಹುಬ್ಬಳ್ಳಿ: ಲಂಡನ್​ನಿಂದ ಪಾರ್ಸಲ್ ಬಂದಿದೆ. ಅದನ್ನು ಪಡೆಯಲು ವಿವಿಧ ಶುಲ್ಕಗಳನ್ನು ಕಟ್ಟಬೇಕು ಎಂದು ನಂಬಿಸಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ನವನಗರ ನಿವಾಸಿ ಪ್ರಮೋದ್​ ಕುಲಕರ್ಣಿ ವಂಚನೆಗೊಳಗಾಗಿರುವ ಯುವಕ. ಲಂಡನ್​ನಿಂದ ದುಬಾರಿ ಬೆಲೆಯ ಗಿಫ್ಟ್ ನೀಡುವುದಾಗಿ ಆಮಿಷವೊಡ್ಡಿ ಮನೆಗೆ ಕೊರಿಯರ್ ಪಾರ್ಸಲ್ ಕಳಿಸುವುದಾಗಿ ಹೇಳಿದ ಇಬ್ಬರು ಅಪರಿಚಿತರು ಹಿಂದಿ ಭಾಷೆಯಲ್ಲಿ ಲಂಡನ್​ನಿಂದಲೇ ವಾಟ್ಸ್ಯಾಪ್​ ಕಾಲ್, ಚಾಟ್ ಮಾಡಿ, ಮಾತನಾಡಿ ನಂಬಿಕೆ ಬರುವಂತೆ ಮಾಡಿದ್ದಾರೆ. ಬಳಿಕ ಪ್ರಮೋದ್​ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 5,15,549 ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.

ಈ‌ ಕುರಿತಂತೆ ಇದೀಗ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.