ETV Bharat / state

ಕಬ್ಬಿನ ಬಿಲ್​ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ 3 ದಿನಗಳ ಡೆಡ್​ಲೈನ್​: ಸಚಿವ ಮುನೇನಕೊಪ್ಪ - ಕಬ್ಬಿನ ಬಿಲ್ ಪಾವತಿಗೆ ಮೂರು ದಿನಗಳ ಗಡುವು

ರೈತರಿಗೆ ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದು ಸಚಿವ ಶಂಕರ್ ಪಾಟೀಲ್​​​ ಮುನೇನಕೊಪ್ಪ ತಿಳಿಸಿದ್ದಾರೆ.

3 days deadline to company to clear sugarcane bill says minister munenkoppa
ಸಚಿವ ಮುನೇನಕೊಪ್ಪ ಪ್ರತಿಕ್ರಿಯೆ
author img

By

Published : Oct 2, 2021, 3:58 PM IST

ಹುಬ್ಬಳ್ಳಿ: ರೈತರ ಕಬ್ಬಿನ ಬಿಲ್ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರು ಭಯ ಪಡುವ ಆತಂಕ ಇಲ್ಲ. ಈಗಾಗಲೇ ರಾಜ್ಯದ ಸಕ್ಕರೆ ಕಾರ್ಖಾನೆಗಳೊಂದಿಗೆ ಮೀಟಿಂಗ್ ಮಾಡಲಾಗಿದೆ. ಕಬ್ಬಿನ ಬಾಕಿ ಬಿಲ್ ನೀಡುವಂತೆ ಮೂರು ದಿನಗಳ ಕಾಲಾವಕಾಶ ಕೊಡಲಾಗಿದೆ. ಇನ್ನೂ ಏಳು ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಅದನ್ನು ಮೂರು ದಿನದಲ್ಲೇ ಪಾವತಿ ಮಾಡಲು ಹೇಳಿದ್ದೇನೆ ಎಂದರು.

ಸಚಿವ ಮುನೇನಕೊಪ್ಪ ಪ್ರತಿಕ್ರಿಯೆ

ರಾಜ್ಯ ಸರ್ಕಾರ ರೈತರ ಪರವಾಗಿದೆ. ರೈತರ ಏಳಿಗೆ ನಮಗೆ ಶ್ರೀರಕ್ಷೆ. ಅದಕ್ಕಾಗಿ ಅನ್ನದಾತರು ಆತಂಕಕ್ಕೆ ಒಳಗಾಗಬಾರದು. ಪಕ್ಷಪಾತ ಮಾಡದೇ ಅಂಕಿ ಸಂಖ್ಯೆಯ ದಾಖಲೆ ನೀಡಿದ್ದೇನೆ. ಯಾರೇ ಸಕ್ಕರೆ ಬಿಲ್ ಉಳಿಸಿಕೊಂಡಿದ್ರೂ ತಕ್ಷಣವೇ ಪಾವತಿಗೆ ಸೂಚನೆ ‌ನೀಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಉಪಚುನಾವಣೆ ಗೆಲುವು ಮುಖ್ಯ, ಅಭ್ಯರ್ಥಿ ಆಯ್ಕೆ ಅಲ್ಲ : ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.