ETV Bharat / state

ಧರ್ಮಸ್ಥಳ ‌ಮಂಜುನಾಥೇಶ್ವರ ವಿವಿಯ 2ನೇ ವರ್ಷಾಚರಣೆ: ಸರ್ಕಾರಿ ಶಾಲೆ ದತ್ತು ಪಡೆಯಲು ತೀರ್ಮಾನ

author img

By

Published : Dec 18, 2020, 3:36 PM IST

ಕಳೆದ ಎರಡು ವರ್ಷಗಳಿಂದ ಧರ್ಮಸ್ಥಳ ‌ಮಂಜುನಾಥೇಶ್ವರ ವಿಶ್ವವಿದ್ಯಾಲಯವು ಡಾ. ವಿರೇಂದ್ರ ಹೆಗ್ಗಡೆಯವರ ಆಶಯದಂತೆ ಒಳ್ಳೆಯ ವಿದ್ಯೆ, ಒಳ್ಳೆಯ ಆರೋಗ್ಯ ಎಂಬುದನ್ನೇ ‌ಧ್ಯೇಯ ವಾಕ್ಯ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದೆ ಎಂದು ಕುಲಪತಿ ಡಾ. ನಿರಂಜನ ಕುಮಾರ್ ಹೇಳಿದ್ದಾರೆ.

Dr. Niranjan Kumar
ಡಾ. ನಿರಂಜನ ಕುಮಾರ್

ಧಾರವಾಡ: ನಗರದ ಧರ್ಮಸ್ಥಳ ‌ಮಂಜುನಾಥೇಶ್ವರ ವಿಶ್ವವಿದ್ಯಾಲಯದ 2ನೇ ವರ್ಷಾಚರಣೆ ಹಿನ್ನೆಲೆ ಸಂಭ್ರಮಾಚರಣೆ ಬದಲಿಗೆ ಹತ್ತು ಶಾಲೆಗಳನ್ನು ದತ್ತು ಪಡೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಕುಲಪತಿ ಡಾ. ನಿರಂಜನ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಧರ್ಮಸ್ಥಳ ‌ಮಂಜುನಾಥೇಶ್ವರ ವಿಶ್ವವಿದ್ಯಾಲಯವು ಡಾ. ವಿರೇಂದ್ರ ಹೆಗ್ಗಡೆಯವರ ಆಶಯದಂತೆ ಒಳ್ಳೆಯ ವಿದ್ಯೆ, ಒಳ್ಳೆಯ ಆರೋಗ್ಯ ಎಂಬುದನ್ನೇ ‌ಧ್ಯೇಯ ವಾಕ್ಯ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದೆ. ಈ ವಿಶ್ವವಿದ್ಯಾಲಯಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆ ಈ‌ ಸಲ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಓದಿ: ಬಾಲ ನ್ಯಾಯ ಮಂಡಳಿ ಆಯ್ಕೆ ಸಮಿತಿಗೆ ಅರ್ಹರಲ್ಲದವರ ನೇಮಕ ಆರೋಪ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಅದರಲ್ಲಿ ಪ್ರಮುಖವಾಗಿ ಧಾರವಾಡ ಸುತ್ತಮುತ್ತಲಿನ ಹತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ನಿರ್ಧಾರ ಮಾಡಲಾಗಿದೆ ಎಂದರು.

ಕೊರೊನಾ ಹಿನ್ನೆಲೆ ಅದ್ಧೂರಿ ಕಾರ್ಯಕ್ರಮದ ಬದಲಾಗಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.