ETV Bharat / state

ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 25 ಜನರಿಗೆ ಕೋವಿಡ್ ದೃಢ - SDM Medical College

ನಿನ್ನೆ ಮತ್ತು ಇಂದು ಸ್ವ್ಯಾಬ್ ಸಂಗ್ರಹಿಸಿದ್ದ 2217 ಜನರಲ್ಲಿ ಕೇವಲ 25 ವ್ಯಕ್ತಿಗಳಲ್ಲಿ ಮಾತ್ರ ಸೋಂಕು ಕಂಡು ಬಂದಿದೆ.

ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 25 ಜನರಿಗೆ ಕೋವಿಡ್ ದೃಢ

author img

By

Published : Nov 28, 2021, 12:48 AM IST

ಧಾರವಾಡ: ಇಲ್ಲಿನ ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂದು ಕೋವಿಡ್ ತಪಾಸಣೆಗೆ ಒಳಗಾಗಿದ್ದ 2217 ಜನರ ಕೋವಿಡ್ ತಪಾಸಣಾ ವರದಿಗಳು ಲಭ್ಯವಾಗಿದ್ದು, ಇವರಲ್ಲಿ 25 ಜನರಿಗೆ ಮಾತ್ರ ಕೋವಿಡ್ ಸೋಂಕು ದೃಢವಾಗಿದೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ತಪಾಸಣೆ ಮಾಡಲಾಗಿದ್ದ 1756 ಜನರಲ್ಲಿ 281 ಜನರಲ್ಲಿ ಸೋಂಕು ದೃಢಪಟ್ಟು, ಪಾಸಿಟಿವಿಟಿ ದರ ಶೇ.16 ಕ್ಕೇರಿತ್ತು. ನಿನ್ನೆ ಮತ್ತು ಇಂದು ಸ್ವ್ಯಾಬ್ ಸಂಗ್ರಹಿಸಿದ್ದ 2217 ಜನರಲ್ಲಿ ಕೇವಲ 25 ವ್ಯಕ್ತಿಗಳಲ್ಲಿ ಮಾತ್ರ ಸೋಂಕು ಕಂಡು ಬಂದಿದೆ. ಪಾಸಿಟಿವಿಟಿ ದರ ಶೇ.1.12 ಇದೆ.

ಎಸ್ ಡಿ ಎಂ‌ ಆವರಣದ ವಿದ್ಯಾರ್ಥಿಗಳು,ವೈದ್ಯರು,ಸಿಬ್ಬಂದಿ, ರೋಗಿಗಳು, ಸಹಾಯಕರು ಸೇರಿ ಒಟ್ಟು 3973 ತಪಾಸಣೆಯಿಂದ 306 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಎಸ್ ಡಿ ಎಂ ಆವರಣದ ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಕೆಲವರಲ್ಲಿಯೇ ಈ ಸೋಂಕು ಸೀಮಿತವಾಗಿದೆ. ರೋಗಿಗಳು,ಅವರ ಆರೈಕೆದಾರರಲ್ಲಿ ಈ ಸೋಂಕು ವ್ಯಾಪಿಸಿಲ್ಲ. ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸರು,ಎಸ್ ಡಿ ಎಂ ಆಡಳಿತ ಮಂಡಳಿ ಬಿಗಿಕ್ರಮಗಳನ್ನು ಮುಂದುವರೆಸಲಿವೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.